ಮಡಿಕೇರಿ ಜ.1 NEWS DESK : ಪೊನ್ನಂಪೇಟೆ ಪಟ್ಟಣ ವ್ಯಾಪ್ತಿಯ ವಾಣಿಜ್ಯ ಮಳಿಗೆದಾರರಿಗೆ/ ಉದ್ದಿಮೆದಾರರಿಗೆ, ಅಂಗಡಿ, ಹೋಟೆಲ್, ಲಾಡ್ಜ್ ಮಾಲೀಕರು ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕಿದೆ. ಅದರಂತೆ, ಎಲ್ಲಾ ಅಂಗಡಿ/ ಮುಂಗಟ್ಟು/ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಪದ ಬಳಕೆಮಾಡುವಂತೆ ಆದೇಶವಿದೆ. ಆದ್ದರಿಂದ ಪೊನ್ನಂಪೇಟೆ ಪಟ್ಟಣದ ವ್ಯಾಪ್ತಿಯಲ್ಲಿನ ಎಲ್ಲಾ ಅಂಗಡಿ /ಮುಂಗಟ್ಟು/ ವಾಣಿಜ್ಯ ಮಳಿಗೆಗಳಲ್ಲಿನ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ಕನ್ನಡ ಪದಗಳ ಬಳಕೆ ಕಡ್ಡಾಯವಾಗಿದೆ. ಒಂದು ವೇಳೆ ನಾಮಫಲಕದಲ್ಲಿ ಶೇ.60 ಕನ್ನಡ ಪದ ಬಳಕೆಯಾಗದೇ ಇದ್ದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಈ ನಾಮಫಲಕವನ್ನು ತೆರವುಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ತಮ್ಮಿಂದ ವಸೂಲಿ ಮಾಡಲಾಗುವುದು ಹಾಗೂ ತಮಗೆ ನೀಡಿರುವ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ, ಕಾನೂನಿನಂತೆ ಕ್ರಮಕೈಗೊಳ್ಳಲಾಗವುದು. ಕಾರ್ಯಾಚರಣೆಯಿಂದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾದಲ್ಲಿ ಪಟ್ಟಣ ಪಂಚಾಯಿತಿ ಜವಾಬ್ದಾರಿಯಲ್ಲ ಎಂದು ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಗೋಪಿ ತಿಳಿಸಿದ್ದಾರೆ.