ಮಡಿಕೇರಿ ಜ.1 NEWS DESK : ಭುವನೇಶ್ವರದ ಕಾಳಿಂಗ ಇನ್ಸ್‍ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಹಾಗೂ ಕಾಳಿಂಗ ಇನ್ಸ್‍ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಕಿಟ್ ಮತ್ತು ಕಿಸ್) ಸ್ಟೇಡಿಯಂನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. 200 ಮೀಟರ್ಸ್ ಓಟದಲ್ಲಿ ಉನ್ನತಿ 23.98 ಸೆಕೆಂಡ್‍ನಲ್ಲಿ ಗುರಿ ತಲುಪಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಗಳಿಸಿದ್ದಾರೆ. ಬೆಂಗಳೂರಿನ ರೇವಾ ವಿವಿಯನ್ನು ಪ್ರತಿನಿಧಿಸಿದ್ದ ಉನ್ನತಿ ಮಡಿಕೇರಿಯವರಾದ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ದಂಪತಿಯ ಪುತ್ರಿ.