ಮಡಿಕೇರಿ ಜ.1 NEWS DESK : ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಕಿಶನ್ ಪೊನ್ನೆಟ್ಟಿಯಂಡ 1008 ಮತ, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಪುಂಡರೀಕ ಅರಂಬೂರು 986 ಮತ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಪಕ್ಕಿರ 885 ಮತ, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ವಸಂತ ನಾಯ್ಕ 1001 ಮತ, ಮಹಿಳೆಯರ ಕ್ಷೇತ್ರದಲ್ಲಿ ಪ್ರಿಯಾಂಕಾ ರೋಹಿತ್ ಹೊಸೂರು 898 ಮತ, ವಾಣಿ ಜಗದೀಶ್ 853 ಮತ, ಸಾಲಗಾರರಲ್ಲದ ಕ್ಷೇತ್ರದಲ್ಲಿ ದಿನೇಶ್ ಸಣ್ಣಮನೆ 123 ಮತ, ಸಾಮಾನ್ಯ 6 ಕ್ಷೇತ್ರದಲ್ಲಿ ಎಸ್.ಸಿ.ಅನಂತ, 1193, ಯಶವಂತ ದೇವರಗುಂಡ 875, ತೀರ್ಥಪ್ರಸಾದ್ ಕೋಲ್ಚಾರ್ 886, ದಯಾನಂದ ಪನೆಡ್ಕ 902, ಹೊನ್ನಪ್ಪ ಕಾಸ್ಪಾಡಿ 778 ಮತ ಹಾಗೂ ರಾಮಮೂರ್ತಿ ಉಂಬಳೆ 802 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಈ ಸಂದರ್ಭ ಹಾಜರಿದ್ದ ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಅವರು ಮಾತನಾಡಿ ಒಡೆದು ಆಳುವ ರಾಜಕೀಯ ತಂತ್ರಕ್ಕೆ ಸೋಲಾಗಿದೆ. ಬಿಜೆಪಿ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮಕ್ಕೆ ಜಯ ಸಿಕ್ಕಿದೆ ಎಂದು ಬಣ್ಣಿಸಿದರು.