ಮಡಿಕೇರಿ ಜ.1 NEWS DESK : ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಸೇವಾ ಘಟಕದ ವತಿಯಿಂದ ಅಧಿವಕ್ತಾ ಪರಿಷತ್, ದಕ್ಷಿಣ ಪ್ರಾಂತ, ಕೊಡಗು ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಗಾಳಿಬೀಡು ಪಿಎಂ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಹಾಗೂ ಕಾನೂನು ಸೇವಾ ಘಟಕದ ವಿದ್ಯಾರ್ಥಿ ಸಂಯೋಜಕ ಸೂರ್ಯನಾರಾಯಣ ಹೆಗ್ದೆ ‘ಪೋಕ್ಸೋಕಾಯ್ದೆ’ ಮತ್ತು ‘ಸೈಬರ್‍ಅಪರಾಧಗಳು’ ಕುರಿತು ಉಪನ್ಯಾಸ ನೀಡಿದರು.
ಅಂತಿಮ ವರ್ಷದ ವಿದ್ಯಾರ್ಥಿ ಜ್ಞಾನೇಶ್ ಪಿ.ಎಸ್ ‘ಮೋಟಾರು ವಾಹನಗಳ ಕಾಯ್ದೆ’ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಗಾಳಿಬೀಡು ಪಿಎಂ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ದಿನೇಶ್, ಅಧಿವಕ್ತಾ ಪರಿಷತ್, ದಕ್ಷಿಣ ಪ್ರಾಂತದ ಕೊಡಗು ಜಿಲ್ಲಾಧ್ಯಕ್ಷ ಮೋಹನ ಕುಮಾರ್ ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ಕಲ್ಲೂರಾಯ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಜೆ.ಬಾಳಿಗ ಹಾಗೂ ಗೆಸ್ಟ್ ಲೆಕ್ಚರ್ಸ್ ಘಟಕದ ವಿದ್ಯಾರ್ಥಿ ಸಂಯೋಜಕಿ ದೀಪ್ತಿ ದೇವಯ್ಯ ಉಪಸ್ಥಿತರಿದ್ದರು.