ವಿರಾಜಪೇಟೆ ಜ.2 NEWS DESK : ಸಂಘ-ಸಂಸ್ಥೆಗಳ ವ್ಯವಹಾರಗಳು ಬಲಿಷ್ಟವಾಗುವುದು ಗ್ರಾಹಕ ಧರ್ಮದಿಂದಾಗಿ. ಸಿಬ್ಬಂದಿಗಳು ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ಕಲ್ಪಿಸಿದಲ್ಲಿ ಸಹಕಾರ ಕ್ಷೇತ್ರದಲ್ಲಿ ಹೆಸರು ಅಜರಾಮರವಾಗುತ್ತದೆ ಎಂದು ನಿವೃತ್ತ ವಾಯು ಸೇನಾಧಿಕಾರಿ ಬಾಳೆಯಡ ಶಂಭು ಮಂದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆಯ ಗಾಂಧಿನಗರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ನೂತನವಾಗಿ ಆರಂಭಿಸಿರುವ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಸ್ಥೆಯ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರವು ಗ್ರಾಹಕ, ಠೇವಣಿದಾರ ಮತ್ತು ಆಡಳಿತ ಮಂಡಳಿ, ಸಿಬ್ಬಂದಿಗಳನ್ನು ಅಡಕಗೊಂಡಿರುವ ಸಂಸ್ಥೆಯಾಗಿದೆ. ಕಾನೂನು ಮತ್ತು ಸಂಸ್ಥೆಯ ನಿಬಂಧನೆಗಳಿಗೆ ಅನುಗುಣವಾಗಿ ಗ್ರಾಹಕರು ಸಾಲ ಪಡೆದು ಕ್ರಮಬದ್ಧವಾಗಿ ಹಿಂದಿರುಗಿಸಲು ಶಕ್ತರಾಗಿರಬೇಕು, ಸಂಸ್ಥೆಯು ಗ್ರಾಹಕ ಮತ್ತು ಠೇವಣಿದಾರರನ್ನು ಸರಿಸಮಾನವಾಗಿ ಕಾಣವಂತಾಗಬೇಕು, ಇದರಿಂದ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಸಹಕಾರ ಬ್ಯಾಂಕ್ ನ ಮಾಜಿ ಅಧ್ಯಕ್ಷ ಮತ್ತು ಉದ್ಯಮಿ ಕೋಲತಂಡ ಬೋಪಯ್ಯ, ಸಹಕಾರ ಸಂಘದ ಉನ್ನತ್ತಿಗಾಗಿ ಸದಸ್ಯರ ಪರಿಪೂರ್ಣ ಸಹಕಾರ ಅತ್ಯವಶ್ಯಕ. ಸಹಕಾರ ಸಂಘ ಠೇವಣಿದಾರರನನ್ನು ಗುರುತಿಸಿ ಸಂಸ್ಥೆಯಲ್ಲಿ ಠೇವಣಿಗಾಗಿ ಪ್ರೇರಿಸಬೇಕು, ಹೆಚ್ಚು ಹೆಚ್ಚು ಉಳಿತಾಯ ಖಾತೆಗಳನ್ನು ಅಳವಡಿಸುವಂತಾಗಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆರ್.ಬಿ.ಐ. ನಿಂದ ಅಂಗೀಕಾರ ದೊರಕಲು ಅವಕಾಶಗಳು ದೊರಕುತ್ತದೆ. ಬಡ್ಡಿ ದರ ಮತ್ತು ವಿವಿಧ ಸಾಲದ ಯೋಜನೆಗಳು, ಹೆಚ್ಚು ಪ್ರಚಾರವಾಗಬೇಕು. ಠೇವಣಿಗಳ ಕ್ರೋಡಿಕರಣಕ್ಕೆ ಸಂಸ್ಥೆಯ ನಿರ್ದೇಶಕರು ಪರಿಶ್ರಮ ವಹಿಸಿ ಕ್ರೀಯಶಿಲತೆಯೊಂದಿಗೆ ಸಂಸ್ಥೆಯನ್ನು ಮುನ್ನಡೆಸಬೇಕು ಎಂದು ಹೇಳಿದರು. ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಜುಲೈ ತಿಂಗಳ 2024 ರಿಂದ ಸಹಕಾರ ಸಂಘದ ಆರಂಭಕ್ಕೆ ರೂಪುರೇಖೆ ತಯಾರಿಸಲು ಮುಂದಾಗಿದ್ದು ನಂತರದಲ್ಲಿ ದಿನಗಳಲ್ಲಿ ಕರ್ನಾಟಕ ರಾಜ್ಯ ಸಹಾಕರ ಸಂಘ ಅಧಿನಿಯಮದಂತೆ ಸುಮಾರು 350 ಮಂದಿ ಸದಸ್ಯ ಬಲದಿಂದ ಸುಮಾರು 06 ಲಕ್ಷದ ಬ್ಯಾಂಕ್ ಠೇವಣಿಯೋಂದಿಗೆ ಸಹಕಾರ ಸಂಘ ಕಾರ್ಯರಂಭಗೊಳಿಸಲಾಯಿತು. ಎಲ್ಲಾ ಸದಸ್ಯರ ಸಹಕಾರದಿಂದ ಸಹಕಾರ ಸಂಘದ ಕಚೇರಿಯನ್ನು ಆರಂಭಗೊಳಿಸಿದ್ದೇವೆ. ಮುಂದೆಯು ಎಲ್ಲಾ ಸದಸ್ಯರು ಸಹಕಾರ ಸಂಸ್ಥೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಮಲ್ಲಿಕಾರ್ಜುನಾ, ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಎ.ಡಿ.ಗಣಪತಿ, ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಪಟ್ಟಡ ಪ್ರಕಾಶ್, ಸಂಘದ ನಿರ್ದೇಶಕರು, ಸದಸ್ಯರು ಹಾಜರುದ್ದರು. ಮುಂಡಚಾಡೀರ ರಿನ್ನಿ ಸ್ವಾಗತಿಸಿ ನಿರೂಪಿಸಿದರು, ಬಿ.ಜಿ.ಪ್ರತೀಶ್ ವಂದಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ