ಮಡಿಕೇರಿ ಜ.2 NEWS DESK : ಕೊಡ್ಲಿಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಡಿ.ತಮ್ಮಯ್ಯ, ಉಪಾದ್ಯಕ್ಷರಾಗಿ ಹೆಚ್.ಜೆ.ಪ್ರವೀಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಡ್ಲಿಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಹನ್ನೊಂದು ಸದಸ್ಯ ಬಲದ ಬ್ಯಾಂಕಿನಲ್ಲಿ ತಮ್ಮಯ್ಯ ನವರ ತಂಡದ 8 ಮಂದಿ ಭರ್ಜರಿ ವಿಜಯ ಸಾಧಿಸಿದ್ದಾರೆ. ಈ ಸಂದರ್ಭ ನಿರ್ದೇಶಕರುಗಳಾದ ಯತೀಶ್, ಮಹಾಬ್, ನಾಗರಾಜ್, ಮಲ್ಲೇಶ, ರಂಜಿತಾ, ದೊಡ್ಡಯ್ಯ ಹಾಗೂ ಸಂಘದ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಮೋಹನ್ ಕಾರ್ಯ ನಿರ್ವಹಿಸಿದರು.