ಮಡಿಕೇರಿ ಜ.4 NEWS DESK : ಕೊಡ್ಲಿಪೇಟೆಯ ಬೆಸೂರು ಜೈ ಭೀಮ್ ವಿಪ್ಲವ ಯುವ ಬಳಗದ ವತಿಯಿಂದ ಬೆಸೂರಿನಲ್ಲಿ ಜ.5 ರಂದು ಭೀಮ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಸೂರು ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜೈ ಭೀಮ್ ವಿಪ್ಲವ ಯುವ ಬಳಗದ ಅಧ್ಯಕ್ಷ ಎನ್.ಆರ್.ರಂಗಸ್ವಾಮಿ (ಪಾಂಡು) ವಹಿಸಲಿದ್ದಾರೆ. ಮುಖ್ಯತಿಥಿಗಳಾಗಿ ಅರಕಲಗೋಡು ಶಾಸಕ ಎ.ಮಂಜು, ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸೀಮೆಂಟ್ ಮಂಜು, ಬೆಸೂರು ಗ್ರಾ.ಪಂ ಅಧ್ಯಕ್ಷರಾದ ಕಮಲಮ್ಮ, ಎಸ್‍ಸಿ-ಎಸ್ಟಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರ ಪಾಲ್ಗೊಳ್ಳಲಿದ್ದು, ಖ್ಯಾತ ವಕೀಲ ಹಾಗೂ ಅಂಬೇಡ್ಕರ್ ವಿಚಾರವಾದಿ ಪ್ರೊ.ಹರಿರಾಮ್ ಮುಖ್ಯ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಕೊಡ್ಲಿಪೇಟೆ ವೃತ್ತದಿಂದ ಬೆಸೂರು ವೃತ್ತದವರೆಗೆ ಬೈಕ್ ಜಾಥಾದ ಮೂಲಕ ಕೊರೆಗಾಂವ್ ವಿಜಯಸ್ತಂಭದ ಮೆರವಣಿಗೆ ನಡೆಯಲಿದೆ. ಆದ್ದರಿಂದ ಸಾರ್ವಜನಿಕರು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜೈ ಭೀಮ್ ವಿಪ್ಲವ ಯುವ ಬಳಗದ ನಿರ್ದೇಶಕ ಸುಂದರೇಶ್ ಮನವಿ ಮಾಡಿದ್ದಾರೆ.