ಸೋಮವಾರಪೇಟೆ ಜ.4 NEWS DESK : ತಾಲೂಕಿನ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕಟ್ಟಡ ದುರಸ್ತಿ ಹಾಗೂ ಬಿಸಿಯೂಟದ ಹಾಲ್ ನಿರ್ಮಾಣಕ್ಕೆ ಅನುದಾನ ಕೋರಿ ಶಾಸಕ ಡಾ.ಮಂತರ್‍ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ನೂತನ ವರ್ಷಾಚರಣೆಯ ಪ್ರಯುಕ್ತ ಶಾಲಾ ಕಾಲೇಜು ಮಕ್ಕಳಿಗೆ ಶಾಸಕರು ಸಿಹಿ ವಿತರಿಸಿದರು. ಇದೇ ಸಂದರ್ಭ ಶಾಲಾ ಮಕ್ಕಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಆಲಿಸಿದ ಶಾಸಕರು, ಪಕ್ಕದ ಗ್ರಾಮಗಳಿಂದ ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ಬಸ್ ಸಮಸ್ಯೆ, ಕಾಡಾನೆ ಹಾವಳಿ, ಶಾಲೆ ಸಮೀಪ ಇರುವ ಅರಣ್ಯ ಪ್ರದೇಶದಿಂದ ಚಿಕ್ಕ ಕೀಟಗಳ ಉಪಟಳ ಆಗುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ಸಮಸ್ಯೆಗಳ ಕುರಿತು ತಕ್ಷಣವೇ ಪರಿಹರಿಸಲಾಗುವುದೆಂದು ಶಾಸಕರು ಹೇಳಿದರು. ಶಾಸಕರು ಶಾಲೆಗೆ ಭೇಟಿ ನೀಡಿದ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯೋಗೇಶ್, ಸದಸ್ಯರಾದ ಭರತ್, ಕಾಲೇಜು ಪ್ರಭಾರ ಪ್ರಾಂಶುಪಾಲ ಎಚ್.ಕೆ ಉಮೇಶ್ ಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಎಂ.ಯಶ್‍ವಂತ್ ಕುಮಾರ್ ಇದ್ದರು.