ಮಡಿಕೇರಿ ಜ.6 NEWS DESK : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಸುತ್ತಿರುವ ರಾಜ್ಯ ವಲಯದ ಕ್ರೀಡಾ ಶಾಲೆ/ಕ್ರೀಡಾ ವಸತಿ ನಿಲಯಗಳಿಗೆ 2025-26ನೇ ಸಾಲಿಗೆ 8 ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ಜ.16 ರಂದು ಮಡಿಕೇರಿ ತಾಲ್ಲೂಕಿನವರಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ, ಜ.17 ರಂದು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನವರಿಗೆ ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯಲ್ಲಿ, ಜನವರಿ, 18 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನವರಿಗೆ ಪೊನ್ನಂಪೇಟೆಯ ತಾಲ್ಲೂಕು ಮಿನಿ ಕ್ರೀಡಾಂಗಣದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಬಿ.ಜಿ.ಮಂಜುನಾಥ್, ಅಥ್ಲೇಟಿಕ್ ತರಬೇತುದಾರರು, ಕ್ರೀಡಾ ಶಾಲೆ ಕೂಡಿಗೆ ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ದೂ.ಸಂ. 9342563014, ವೆಂಕಟೇಶ್ ಬಿ.ಎಸ್. ಹಾಕಿ ತರಬೇತುದಾರರು, ಕ್ರೀಡಾ ಶಾಲೆ, ಕೂಡಿಗೆ ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆಕ ದೂ. 9844326007, ದಿನಾಮಣಿ, ಹಾಕಿ ತರಬೇತುದಾರರು, ಕ್ರೀಡಾ ಶಾಲೆ, ಕೂಡಿಗೆ ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ದೂ. ಸಂ.9663241305, ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ಸುರೇಶ್ ಜಿ. ಜಿಮ್ನಾಸ್ಟಿಕ್ ತರಬೇತುದಾರರು, ಕ್ರೀಡಾ ಶಾಲೆ ಕೂಡಿಗೆ ದೂ.ಸಂ. 9483629216. ಮಡಿಕೇರಿ ತಾಲ್ಲೂಕಿಗೆ ಮಹಾಬಲ ಕೆ., ಅಥ್ಲೇಟಿಕ್ ತರಬೇತುದಾರರು, ಕ್ರೀಡಾ ನಿಲಯ, ಮಡಿಕೇರಿ ದೂ.ಸಂ.9980887499, ಕೆ.ಕೆ.ಬಿಂದ್ಯಾ, ಹಾಕಿ ತರಬೇತುದಾರರು, ಕ್ರೀಡಾ ನಿಲಯ, ಮಡಿಕೇರಿ ದೂ.ಸಂ. 8105122430. ಪೊನ್ನಂಪೇಟೆ ಮತ್ತು ವಿರಾಜಪೇಟೆಗೆ ಕೆ.ಎಂ.ಸುಬ್ಬಯ್ಯ, ಹಾಕಿ ತರಬೇತುದಾರರು, ಕ್ರೀಡಾ ನಿಲಯ ಪೊನ್ನಂಪೇಟೆ ದೂ.ಸಂ. 8197790350 ಹಾಗೂ ಗಣಪತಿ, ಹಾಕಿ ತರಬೇತುದಾರರು, ಕ್ರೀಡಾ ನಿಲಯ ಪೊನ್ನಂಪೇಟೆ ದೂ.ಸಂ. 8951287301 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಕಿರಿಯ ವಿಭಾಗದಲ್ಲಿ ಆಯ್ಕೆಗೆ 01-06-2025 ಕ್ಕೆ 14 ವರ್ಷದೊಳಗಿರಬೇಕು (ಅಂದರೆ 01-06-2011 ರ ನಂತರ ಜನಿಸಿರಬೇಕು). 8ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುವುದು. ಹಿರಿಯರ ವಿಭಾಗದಲ್ಲಿ ಆಯ್ಕೆಗೆ 01-06-2025 ಕ್ಕೆ 18 ವರ್ಷದೊಳಗಿರಬೇಕು.(ಅಂದರೆ 01-06-2007 ರ ನಂತರ ಜನಿಸಿರಬೇಕು. ಪ್ರಥಮ ಪಿಯುಸಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.