ಮಡಿಕೇರಿ ಜ.9 NEWS DESK : ಮದೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಗೋಳಿಕಜೆ ಧನಂಜಯ್ ಹಾಗೂ ಉಪಾಧ್ಯಕ್ಷರಾಗಿ ಯೋಗೀಶ ಬಿ.ಎಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ಸದಸ್ಯರುಗಳಾಗಿ ಚಂದ್ರಶೇಖರ ಮುದ್ಯನ, ರಾಜು ಕೆ.ಆರ್, ಸೀನಾ ಪಿ.ಬಿ, ರಾಮಯ್ಯ ನಡುಗಲ್ಲು, ಇಂದ್ರಕುಮಾರ್ ಬೈನರವನ, ಪುಂಡರೀಕ ಮುಕ್ಕಾಟಿ, ಸುರೇಶ್ ಕಾಯರ್‍ಮಾರ್, ಪಾರ್ವತಿ ಉಗ್ರಾಣಿ, ಪ್ರಜ್ಞ ಬಿರುಮಣನ ಹಾಗೂ ಅನು ಪವಿದ ಮುದ್ಯನ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.