ಮಡಿಕೇರಿ ಜ.16 NEWS DESK : ಸೌತ್ ಇಂಡಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸೌತ್ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ಶಿಪ್ ನಲ್ಲಿ 5 ಕಿ.ಮೀ ದೂರದ ವಾಕ್ ರೇಸ್ ನಲ್ಲಿ 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಡಿಕೇರಿಯ ಎಡಿಕೇರಿ ಎನ್.ವಿಶಾಲಾಕ್ಷಿ ಅವರು ಪ್ರಥಮ ಬಹುಮಾನ ಗೆದ್ದಿದ್ದಾರೆ. ಇವರು ದಿ.ಎಡಿಕೇರಿ ನರೇಶ್ ಅವರ ಪತ್ನಿಯಾಗಿದ್ದು, ಬಾಲ್ಯದಿಂದಲೇ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಹಲವು ಪದಕಗಳನ್ನು ಗೆದ್ದು ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಹಿಂದೆ ಎಡಿಕೇರಿ ವಿಶಾಲಾಕ್ಷಿ ಅವರು ಗೃಹ ರಕ್ಷಕ ದಳದಲ್ಲಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ.