ವಿರಾಜಪೇಟೆ ಜ.17 NEWS DESK : ಕೊಡಗಿನ ಏಕೈಕ ದಂತ ವೈದ್ಯ ಸಂಸ್ಥೆಯು ಈ ಭಾಗಕ್ಕೆ ಹೆಮ್ಮೆ ನೀಡಿರುವುದು ಮಾತ್ರವಲ್ಲದೆ ಅಸಂಖ್ಯಾತ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸುವುದರಲ್ಲಿ ಉತ್ತಮ ಕೊಡುಗೆ ನೀಡಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ವಿರಾಜಪೇಟೆಯ ಮಗ್ಗುಲದ ಬಳಿಯಿರುವ ಕೊಡಗು ದಂತ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕ ಪೊನ್ನಣ್ಣ ಅವರು ಸಂಸ್ಥೆಯು ಉತ್ತಮ ರೀತಿಯಲ್ಲಿ ಮುಂದುವರೆದು ಸಮಾಜಕ್ಕೆ ಉತ್ತಮ ವೈದ್ಯರನ್ನು ನೀಡುವುದೊಂದಿಗೆ ತಮ್ಮ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿದರು. ದಂತ ವೈಧ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಮುಂದೆಯೂ ಸ್ವಯಂ ಕಲಿಕೆ ವೃತ್ತಿಯಲ್ಲಿ ನಿರಂತರವಾಗಿ ವೈದ್ಯಕೀಯ ಲೋಕದ ಕುರಿತು ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತಾಗಲಿ. ಯುವ ಪದವಿಧರರು ವೈಧ್ಯಕೀಯ ವೃತ್ತಿಯಲ್ಲಿ ಹೊಸ ಆವಿಷ್ಕಾರ, ಆಧುನಿಕ ಚಿಕಿತ್ಸಾ ಪದ್ದತಿಯನ್ನು ಅಳವಡಿಸಿಕೊಂಡು ಉತ್ತಮ ವೈದ್ಯರಾಗಿ ರೋಗಿಗಳಿಗೆ ಸೇವೆ ನೀಡುವಂತೆ ವೈಧ್ಯಕೀಯ ವೃತ್ತಿಯಲ್ಲಿ ಡಿಜಿಟಲ್ ವ್ಯವಸ್ಥೆ ಕೃತಕ ಬುದ್ದಿಗಳನ್ನು ಅಳವಡಿಸಿಕೊಳ್ಳಬೇಕಿದೆ. ನಿರಂತರವಾಗಿ ಮುಂದಿನ ವೈಧ್ಯಕೀಯ ಲೋಕದ ಕುರಿತು ಜ್ಞಾನ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ದಂತ ವೈಧ್ಯಕೀಯದಲ್ಲಿ ಹಲವಾರು ವಿಭಾಗ ಇದ್ದು ಅದರಲ್ಲಿ ನಿಮಗೆ ಬೇಕಾದದ್ದನ್ನು ಆರಿಸಿಕೊಂಡು ಅದರಲ್ಲಿ ಪರಿಣಿತಿ ಹೊಂದಿ ತಜ್ಞ ವೈದ್ಯರಾಗುವ ಆಯ್ಕೆ ಮಾಡಿಕೊಳ್ಳಿ. ಚಿಕಿತ್ಸಾ ವಿಧಾನದಲ್ಲಿ ಬದಲಾವಣೆ ತಂದುಕೊಂಡು ಮುಂದೆ ಬರುವ ಆಧುನಿಕ ಚಿಕಿತ್ಸಾ ಪದ್ದತಿಯನ್ನು ಸಹ ಅಳವಡಿಸಿಕೊಳ್ಳಬೇಕು ಎಂದರು. ತಾಲೂಕಿನಲ್ಲಿ ದಂತ ವೈದ್ಯಕೀಯ ಕಾಲೇಜು ಪ್ರಾರಂಭಗೊಂಡಾಗ ಒಂದು ಹಂತದಲ್ಲಿ ಸಾಗಿತ್ತು. ಇದೀಗ ದಂತ ವೈದ್ಯಕೀಯ ಕಾಲೇಜಿನ ಕೀರ್ತಿ ವಿಶ್ವ ವಿಖ್ಯಾಥಿಯನ್ನು ಪಡೆದುಕೊಂಡಿದೆ. ಇದು ನಮ್ಮ ಕೊಡಗಿಗೆ ಹೆಮ್ಮೆ ತರುವ ವಿಚಾರ ಎಂದು ಶ್ಲಾಘಿಸಿದರಲ್ಲದೆ ಈ ಕಾಲೇಜು ಪ್ರತಿಯೊಂದು ಸಂಸ್ಥೆಗೂ ಮಾದರಿಯಾಗಲಿ, ಸಂಸ್ಥೆ ವತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯ ಹೊರಹೊಮ್ಮಲಿ, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ನಮ್ಮ ನಾಡಿನ ಕೀರ್ತಿ ಎಲ್ಲೆಡೆ ಪಸರಿಸುವಂತಾಗಲಿ ಎಂದು ಆಶಿಸಿದರು. ಕೊಡಗು ದಂತ ಮಹಾವಿದ್ಯಾಲಯದ ಡೀನ್ ಡಾ.ಸುನೀಲ್ ಮುದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದಂತ ಕಾಲೇಜಿನಲ್ಲಿ ಬೆಳ್ಳಿ ಮಹೋತ್ಸವ ನಡೆಯುತ್ತಿರುವುದು ಉತ್ತಮ ವಿಚಾರ. ದಂತ ಸಂಸ್ಥೆಯು ಅಗತ್ಯ ಅಡಿಪಾಯ ಹಾಕಿಕೊಟ್ಟಿದೆ ಮುಂದೆ ಕಾಲ ಕಾಲಕ್ಕೆ ಬರುವ ತಂತ್ರಜ್ಞಾನದ ಆವಿಷ್ಕಾರಗಳನ್ನು ಅಳವಡಿಸಿಕೊಂಡು ವೃತ್ತಿ ಪರಿಣಿತಿಯನ್ನು ಹೆಚ್ಚಿಸಿಕೊಳ್ಳುವಂತಾಗಬೇಕು. ದಂತ ವೈದ್ಯಕೀಯ ಕಾಲೇಜು ಅನೇಕ ಉತ್ತಮ ವೈದ್ಯರನ್ನು ವೈಧ್ಯಕೀಯ ಲೋಕಕ್ಕೆ ನೀಡುತ್ತಿದ್ದು, ದಂತ ಆರೋಗ್ಯ ಕಾಪಾಡಲು ಜನರಿಗೆ ಸದಾ ನುರಿತ ವೈದ್ಯರ ಅಗತ್ಯವಿದೆ. ನಮ್ಮ ದಂತ ವೈಧ್ಯಕೀಯ ಮಹಾವಿದ್ಯಾಲಯ ವಿಶ್ವದಲ್ಲಿನ ದಂತ ವೈಧ್ಯಕೀಯ ಕಾಲೇಜುಗಳ ಸಮಕಾಲೀನತೆಯಲ್ಲಿ ಇದೆ. ವಿದೇಶದ ದಂತ ವೈಧ್ಯಕೀಯ ಕಾಲೇಜಿನ ಜೊತೆ ಅನ್‍ಲೈನ್ ಮೂಲಕ ಸಂವಾದ ಸಂಶೋಧನೆಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಆಧುನಿಕ ದಂತ ವೈಧ್ಯಕೀಯದ ಪರಿಚಯ ಮಾಡಿ ಜ್ಞಾನ ಹೆಚ್ಚಿಸಲಾಗುತ್ತಿದೆ. ವೈಧ್ಯಕೀಯ ಕಲಿಕೆಯಲ್ಲಿ ಸಂಶೋಧನೆ ಅತಿ ಮುಖ್ಯವಾಗಿರುತ್ತದೆ, ಕೌಶಲ್ಯಗಳ ಮೂಲಕ ಉತ್ತಮ ವೈದ್ಯರಾಗಿ ಮುಂದೆ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರಲ್ಲದೆ ಕಾಲೆಜು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಕಾಲೇಜು ವತಿಯಿಂದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಕೊಡವ ಸಮಾಜದ ವತಿಯಿಂದ ಸಂಸ್ಥೆಯು ಬೆಳ್ಳಿ ಮಹೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ ಡೀನ್ ಡಾ. ಸುನೀಲ್ ಮುದ್ದಯ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವೀಡನ್‍ನ ಉಪ್ಪ್ಸಲ ಯುನಿವರ್ಸಿಟಿ ಹಾಸ್ಪಿಟಲ್‍ನ ಹೆಡ್ ಆಫ್ ರಿಸರ್ಚ್ ಬೋರ್ಡ್, ಪ್ಲಾಸ್ಟಿಕ್ ಅಂಡ್ ಮ್ಯಾಕ್ಷಿಲೋಪೇಸಿಯಲ್ ಸರ್ಜನ್ ಪ್ರೋ. ಡಾ. ಅಂಡ್ರಿಯಾಸ್ ತೋರ್, ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಸಿ ಪೆÇನ್ನಪ್ಪ, ದಂತ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಜಿತೇಶ್ ಜೈನಿ, ಡಾ. ಅನ್ಹ್‍ಮೋಲ್ ಕಲ್ಹಾ, ಹಾಗೂ ದಂತ ಮಹಾವಿದ್ಯಾಲಯದ ಉಪನ್ಯಾಸಕ ವೃಂದದವರು ಸೇರಿದಂತೆ ದಂತ ವೈದ್ಯಕೀಯ ಕಾಲೇಜುಗಳ ಪದವೀಧರರು ಇದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
Breaking News
- *ಗೋಣಿಕೊಪ್ಪದಲ್ಲಿ ಹೆಚ್.ಆರ್.ಎಸ್ ಕಾರ್ಯಾರಂಭ : ಲೋಗೋ ಅನಾವರಣ*
- *ಚೆಯ್ಯಂಡಾಣೆ-ಕರಡ-ಕಕ್ಕಬೆ ರಸ್ತೆ ದುರಸ್ತಿ ಕಾರ್ಯ ಆರಂಭ*
- *ಕುಶಾಲನಗರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಆರ್.ಶರವಣ ಕುಮಾರ್, ಉಪಾಧ್ಯಕ್ಷರಾಗಿ ನೇತ್ರಾವತಿ ಆಯ್ಕೆ*
- *ಸೋಮವಾರಪೇಟೆ ತಾಲ್ಲೂಕಿನ ವಿವಿಧೆಡೆ ಕಳ್ಳಭಟ್ಟಿ ದಂಧೆ*
- *ಕೊಡಗು ಪೊಲೀಸ್ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ*
- *ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ*
- *’ಭೂ ಗುತ್ತಿಗೆ ಕಾಯ್ದೆ’ ರದ್ದುಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ*
- *ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ : ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ ಚಾಮೆರ ನಕ್ಷದೇಚಮ್ಮ*
- *ಕೊಡಗು : ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಉಪ ಯೋಜನೆ : ಕಾರ್ಯಕ್ರಮಗಳ ಪ್ರಗತಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಗದ್ದೇಹಳ್ಳ : ಜ.23 ರಿಂದ ಅಖಿಲ ಭಾರತ 5+2 ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ*