ಮಡಿಕೇರಿ ಜ.18 NEWS DESK : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಕೊಡವ ವಿದ್ಯಾರ್ಥಿಗಳ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಚಂಗುಲಂಡ ರಕ್ಷಿತ್ ಪೂವಯ್ಯ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸೋಮೆಯಂಡ ತನಿಷ್ ತಮ್ಮಯ್ಯ, ಉಪಾಧ್ಯಕ್ಷರಾಗಿ ನಾಳಿಯಂಡ ಜಶಿಕ, ಸಹ ಕಾರ್ಯದರ್ಶಿಯಾಗಿ ಚೆಯ್ಯಂಡ ಭಕ್ತಿ ಬೋಜಮ್ಮ, ಖಜಾಂಚಿ ಬೇಪಡಿಯಂಡ ರೋಹನ್ ನಾಣಯ್ಯ, ಸಹ ಖಜಾಂಚಿ ಸುಳ್ಳಿಮಾಡ ಎಸ್.ಗಾಯನ ಗಂಗಮ್ಮ, ಸಂಘಟನಾ ಕಾರ್ಯದರ್ಶಿಯಾಗಿ ಕುಟ್ಟಂಜೆಟ್ಟಿರ ಎಸ್.ಚಿನ್ನಪ್ಪ, ಕ್ರೀಡಾ ಕಾರ್ಯದರ್ಶಿಯಾಗಿ ಮಾರ್ಚಂಡ ನಿಹಾಲ್ ಸುಬ್ರಮಣಿ, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಮುಕ್ಕಾಟೀರ ಟಿಂಚಲ್ ತಂಗಮ್ಮ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುಕ್ಕಾಟಿರ ಎಂ.ಚಿನ್ಮಯಿ ಗಂಗಮ್ಮ ನೇಮಕಗೊಂಡಿದ್ದಾರೆ.