ಮಡಿಕೇರಿ NEWS DESK ಜ.18 : ಕಟ್ಟೆಮಾಡು ದೇವಾಲಯದಲ್ಲಿ ನಡೆದ ಭಿನ್ನಾಭಿಪ್ರಾಯಕ್ಕೆ ಸಂಬAಧಿಸಿದAತೆ ಸೌಹಾರ್ದತೆ ಕಾಪಾಡುವ ಪ್ರಕ್ರಿಯೆಗಳಿಗೆ ನಮ್ಮ ಸಹಮತವಿದೆ, ಆದರೆ ಕೊಡವರ ಮೇಲೆ ನಡೆದ ದೌರ್ಜನ್ಯ ಮರೆಮಾಚಿದರೆ ನಮ್ಮ ವಿರೋಧವಿದೆ ಎಂದು ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಸ್ಪಷ್ಟಪಡಿಸಿದ್ದಾರೆ. ಇಂದು ಅಖಿಲ ಕೊಡವ ಸಮಾಜದ ಹೇಳಿಕೆ ಅವರ ವೈಯಕ್ತಿಕ, ಇದಕ್ಕೆ ನಮ್ಮ ಸಂಘಟನೆಯ ಸಹಮತವಿಲ್ಲ. ಕೊಡವರು ಯಾವುದೇ ಜಾತಿ ಅಥವಾ ಜನಾಂಗವನ್ನು ಅವಮಾನಿಸಿ, ಈ ಪ್ರಕರಣವನ್ನು ಹುಟ್ಟು ಹಾಕಲಿಲ್ಲ, ಪ್ರಕರಣದ ನಂತರದ ಬೆಳವಣಿಗೆಗಳನ್ನೇ ದೊಡ್ಡದು ಮಾಡಿ, ಪ್ರಕರಣಕ್ಕೆ ಕಾರಣರಾದವರನ್ನು ರಕ್ಷಿಸಿ, ಕೊಡವರನ್ನೇ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲು ತೆರೆಮರೆಯಲ್ಲಿ ಹುನ್ನಾರ ನಡೆದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಎರಡು ಜನಾಂಗದವರ ನಡುವೆ ಸೌಹಾರ್ದತೆ ಕಾಪಾಡಲು ನಡೆಸುವ ಪ್ರಕ್ರಿಯೆಗಳಿಗೆ ನಮ್ಮ ಸಹಮತವಿದೆ, ಆದರೆ ಅದು ಕೊಡವರ ಮೇಲೆ ನಡೆದ ದೌರ್ಜನ್ಯ ಮತ್ತು ಅವಮಾನಗಳನ್ನು ಮರೆಮಾಚಿ ನಡೆಸುವುದಾದರೆ ಅದಕ್ಕೆ ನಮ್ಮ ವಿರೋಧವಿದೆ, ಕಟ್ಟೆಮಾಡುವಿನಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ, ಇದುವರೆಗೂ ಅವರ ದೂರನ್ನು ಪರಿಗಣಿಸಿ ಎಫ್.ಐ.ಆರ್ ದಾಖಲಿಸಿಲ್ಲ. ಕೊಡವರ ಮೇಲೆ ನಡೆದ ಜನಾಂಗೀಯ ತಾರತಮ್ಯವನ್ನು ಯಾಕೆ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೊಡವರು ಪ್ರಾದೇಶಿಕವಾಗಿ ಅಲ್ಪಸಂಖ್ಯಾತರಾಗಿದ್ದಾರೆ, ರಾಜಕೀಯ ಲಾಬಿ ಇಲ್ಲ ಎನ್ನುವುದನ್ನು ಅಸ್ತ್ರವಾಗಿಸಿಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಕೊಡವರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದೆ. ನಮ್ಮ ಹಿರಿಯ ಮುಖಂಡರನ್ನು ಪರೋಕ್ಷವಾಗಿ ಬೆದರಿಸುವ ಮೂಲಕ ಕೊಡವರನ್ನು ಒಡೆಯುವ ತಂತ್ರವನ್ನು ಬಳಸಿ, ಕೊಡವರ ಬಲವನ್ನು ಕುಗ್ಗಿಸುವ ಯತ್ನ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆಗೆ ಬೆಲೆಕೊಟ್ಟು ಫೆ.10ನೇ ತಾರೀಖಿನವರೆಗೆ ನಾವು ಕಾಯುತ್ತೇವೆ. ಅಷ್ಟರಲ್ಲಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಕೊಡಗು ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು, ಇದು ಕೊಡವರ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಮಾನ ಮನಸ್ಕ ಸಂಘಟನೆಗಳನ್ನು ಸಂಪರ್ಕಿಸಿ ಮುಂದಿನ ಹೋರಾಟವನ್ನು ರೂಪಿಸಲಾಗುವುದು ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.