ಮಡಿಕೇರಿ ಜ.20 NEWS DESK : ಮಂಗಳೂರಿನ ಯೆನೊಪೊಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಮಹಿಳಾ ಯೋಗ ಕ್ಷೇಮ ಚಿಕಿತ್ಸಾಲಯ ಸಹಯೋಗದಲ್ಲಿ ಉಚಿತ ಕೃತ ಅಂಗಾಂಗಳ ವಿತರಣಾ ಶಿಬಿರ ನಡೆಯಲಿದೆ. ಮೈಸೂರು ಸುಯೋಗ್ ಆಸ್ಪತ್ರೆ ಇವರ ವತಿಯಿಂದ 2ಡಿ ಎಕೋ ಮತ್ತು ಇಸಿಜಿ ಸೇರಿದಂತೆ ಉಚಿತ ಹೃದಯ ತಪಾಸಣೆ ಮತ್ತು ಉಚಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ತಜ್ಞ ವೈದ್ಯರುಗಳಿಂದ ಸಮಾಲೋಚನೆ. ಕೊಡಗು ವೈದ್ಯಕೀಯ ಕಾಲೇಜಿನ ಎಲ್ಲಾ ತಜ್ಞರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವು ಜ.26 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಪೊಲೀಸ್ ಮೈತ್ರಿ ಭವನದಲ್ಲಿ ನಡೆಯಲಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಜ.24 ರೊಳಗೆ ದೂ.ಸಂ. 8792874030 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ರೋಗಿಗಳು ಹಳೆಯ ವೈದ್ಯಕೀಯ ದಾಖಲೆಗಳನ್ನು ಹಾಗೂ ಆಧಾರ್ ಕಾರ್ಡ್, ಭಾವಚಿತ್ರ ತರಬೇಕು. ಅದೇ ದಿನ ಕೊಡಗಿನ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ವತಿಯಿಂದ ಕೊಡಗಿನ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಗುಂಪು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9481488602 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಡಾ.ಮೋಹನ್ ಅಪ್ಪಾಜಿ, ಅಧ್ಯಕ್ಷರು, ಎನ್‍ಎಂಓ, ಕೊಡಗು 9845471569 ನ್ನು ಸಂಪರ್ಕಿಸಬಹುದು.