ಮಡಿಕೇರಿ ಜ.20 NEWS DESK : ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಫೆ.27 ರಂದು ಕೊಡಗು ಜಿಲ್ಲೆಯ ಬಡ ಮುಸ್ಲಿಂ ಯುವತಿಯರಿಗೆ ಸುಂಟಿಕೊಪ್ಪದ ಎಸ್.ಎಸ್.ಇಂಟರ್ ನ್ಯಾಷನಲ್ ಹಾಲ್‍ನಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ನಡೆಸಲು ನಿರ್ಧರಿಸಿದ್ದು, ಇದಕ್ಕಾಗಿ ವಧುವಿನ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಹೆಚ್.ಅಹ್ಮದ್ ಹಾಜಿ ಹಾಗೂ ಕಾರ್ಯದರ್ಶಿ ಎಂ.ಇ.ಮೊಹಿದ್ದೀನ್ ತಿಳಿಸಿದ್ದಾರೆ. ಕಳೆದ 21 ವರ್ಷಗಳಿಂದ ಬಡ ಮುಸ್ಲಿಂ ಯುವತಿಯರಿಗೆ ಉಚಿತ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರತ್ತಿರುವ ಆಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯು ಇದೀಗ ತನ್ನ ಕಾರ್ಯ ಸಾಧನೆಯ 22ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ವರ್ಷಕ್ಕೆ ಇಪ್ಪತ್ತೈದು ಯುವತಿಯರ ವಿವಾಹವನ್ನು ಉಚಿತವಾಗಿ ನಡೆಸಿಕೊಡುವ ಗುರಿಯನ್ನು ಸಮಿತಿ ಹೊಂದಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕಳೆದ 21 ವರ್ಷಗಳಲ್ಲಿ 463 ಮುಸ್ಲಿಂ ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿರಿಸುವಂತೆ ಮಾಡುವಲ್ಲಿ ಸಮಿತಿಯು ಗಣನೀಯ ಸಾಧನೆಯನ್ನು ಮಾಡಿದೆ. ಈ ವರ್ಷವೂ ವಧುವಿಗೆ ತಲಾ ಒಂದು ಜೊತೆ ಉಡುಪು, ವರನಿಗೂ ಒಂದು ಜೊತೆ ಉಡುಪು ನೀಡಲಾಗುವುದು. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ವಧು-ವರರ ಕಡೆಯವರಿಗೂ ಸೇರಿದಂತೆ ಸಾರ್ವಜನಿಕ ಬಾಂಧವರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಸಹ ಮಾಡಲಾಗುವುದು. ಒಂದು ಜೋಡಿ ವಿವಾಹಕ್ಕೆ ಸುಮಾರು ಮೂರೂವರೆ ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗಲಿದೆ. ಈ ವಿವಾಹ ಕಾರ್ಯಕ್ರಮಕ್ಕೆ ಅಗತ್ಯವಿರುವ ಮೊತ್ತವನ್ನು ಸಾರ್ವಜನಿಕ ದಾನಿಗಳಿಂದ ನಿರೀಕ್ಷಿಸಲಾಗಿದೆ. ಇಲ್ಲಿಯವರೆಗೆ ಬಡ ಕುಟುಂಬಗಳ ಬವಣೆಯನ್ನು ಮನಗಂಡು ಹಲವಾರು ದಾನಿಗಳು ನೆರವು ನೀಡುತ್ತಾ ಬಂದಿದ್ದು, ಈ ಬಾರಿಯೂ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಉಚಿತ ಸಾಮೂಹಿಕ ವಿವಾಹದ ಅರ್ಜಿ ನಮೂನೆಗಳನ್ನು ಫೆ.15ರ ಒಳಗಾಗಿ ಅಗತ್ಯವಿರುವ ಎಲ್ಲಾ ಲಗತ್ತುಗಳೊಂದಿಗೆ ಭರ್ತಿ ಮಾಡಿ ಸಮಿತಿಗೆ ತಲುಪಿಸಬೇಕು. ಅರ್ಜಿಗಳನ್ನು ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ ಸಮೀಪದ ಫೈವ್‍ಸ್ಟಾರ್ ವಾಚ್ ಅಂಗಡಿ (9844534743), ವಿರಾಜಪೇಟೆಯ ಮಟನ್ ಮಾರ್ಕೆಟ್ ರಸ್ತೆಯ ಗ್ರೀನ್ ಲ್ಯಾಂಡ್ ಬಾಳೆಮಂಡಿ ನೌಫಲ್ (9535323920), ಗೋಣಿಕೊಪ್ಪ ಮುಖ್ಯ ರಸ್ತೆಯ ಟೈಂಮಿಷಿನ್ ವಾಚ್ ಅಂಗಡಿಯ ಬಶೀರ್ ಹಾಜಿ (8289887668), ನೆಲ್ಲಿಹುದಿಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಕೆ.ಹಕೀಂ (9448354568), ಸುಂಟಿಕೊಪ್ಪ 2ನೇ ಬ್ಲಾಕ್ ಕೆ.ಇ.ಬಿ ಬಳಿ ಆರ್.ಹಸನ್‍ಕುಂಞಹಾಜಿ (9886863045), ಕುಶಾಲನಗರ ಜನತಾ ಕಾಲೋನಿ ಎಂ.ಇ.ಮೊಹಿದ್ದೀನ್ (9448504282), ಕೊಡ್ಲಿಪೇಟೆ ಮಸ್ಲಿಸುನ್ನೂರ್ ಮಸೀದಿ ಮಾಜಿ ಅಧ್ಯಕ್ಷ ಸುಲೈಮಾನ್ (9448721203), ನಾಪೋಕ್ಲು ಸ್ಟಾರ್ ಸರ್ವೀಸ್ ಸ್ಟೇಷನ್ ಟಿ.ಎ.ಹನೀಫ್ (9980159825), ಕೊಟ್ಟಮುಡಿ ಪಿ.ಎ.ಹುಸೈನ್ (ಉಂದಾರು-99007502112) ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷ ಬಿ.ಹೆಚ್.ಅಹ್ಮದ್ ಹಾಜಿ – 9480238535, ಉಪಾಧ್ಯಕ್ಷ ಎಂ.ಇ.ಮಹಮ್ಮದ್ – 9964076698, ಕಾರ್ಯದರ್ಶಿ ಎಂ.ಇ.ಮೊಹಿದ್ದೀನ್ -9448504282, ಖಜಾಂಚಿ ಎನ್.ಎ.ಲತೀಫ್ ಹಾಜಿ -7019095426 ಸಂಪರ್ಕಿಸಬಹುದಾಗಿದೆ ಎಂದು ಬಿ.ಹೆಚ್.ಅಹ್ಮದ್ ಹಾಜಿ ತಿಳಿಸಿದ್ದಾರೆ.