ಸೋಮವಾರಪೇಟೆ ಜ.21 NEWS DESK : ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ನಡೆದ 38ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಜೀವನ್ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆಯಿತು. ಕುಶಾಲನಗರದ ಜಿ.ಬಿ.ಎಸ್. ತಂಡ ದ್ವಿತೀಯ, ಸೋಮವಾರಪೇಟೆಯ ಸತ್ಯ ಸ್ಪೋಟ್ರ್ಸ್ ಕ್ಲಬ್ ತೃತೀಯ ಸ್ಥಾನಗಳಿಸಿತು. 20 ವರ್ಷದೊಳಗಿನವರ ವಿಭಾಗದಲ್ಲಿ ಸೋಮವಾರಪೇಟೆಯ ರಾಮದೂತ ತಂಡ ಪ್ರಥಮ, ತೇಜಾ ಬ್ರೋ ತಂಡ ದ್ವಿತೀಯ, ಕುಶಾಲನಗರದ ಜೈ ಮಾರುತಿ ತಂಡ ತೃತೀಯ ಸ್ಥಾನ ಪಡೆಯಿತು. ಪ್ರಾಥಮಿಕ ಶಾಲಾ ವಿಭಾಗದ ಸ್ಪರ್ಧೆಯಲ್ಲಿ ಜಿಎಂಪಿ ಶಾಲಾ ತಂಡ ಪ್ರಥಮ, ಓಎಲ್‍ವಿ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜು ವಹಿಸಿದ್ದರು. ವಿಜೇತ ತಂಡಗಳಿಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಮಧುಸೂದನ್, ಪ.ಪಂ.ಸಿಬ್ಬಂದಿ ಜೀವನ್, ನೇಗಳ್ಳೆ ನಿಂಗಪ್ಪ, ತಲ್ತರೆಶೆಟ್ಟಳ್ಳಿ ರವಿ, ಕರ್ಕಳ್ಳಿ ಇಸಾಕ್, ಶಿಕ್ಷಕ ಪ್ರವೀಣ್, ಸತೀಶ್ ಅವರುಗಳು ಬಹುಮಾನ ವಿತರಿಸಿದರು. ಸಂಘದ ಪದಾಧಿಕಾರಿಗಳಾದ ಹೆಚ್.ಬಿ. ರಾಜಪ್ಪ, ರವೀಂದ್ರ, ಗಿರೀಶ್, ಹೆಚ್.ಎಂ. ನಾಗಣ್ಣ, ಮಂಜು, ಅಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.