ಸೋಮವಾರಪೇಟೆ ಜ.21 NEWS DESK : ಗೌಡಳ್ಳಿ ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್‍ನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸುಗ್ಗಿ ಹಬ್ವವನ್ನು ಸಂಭ್ರಮದಿಂದ ಆಚರಿಸಲಾಯಿತು. ರೈತರ ಕೃಷಿ ಬದುಕನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವ ಸಲುವಾಗಿ ಎತ್ತಿನ ಗಾಡಿ, ಎತ್ತುಗಳು, ಹುಲ್ಲಿನ ಮೆದೆಯ ಮಾದರಿಗಳು, ಒಕ್ಕಲುತನ ಮಾಡಲು ಬಳಸುವ ಸಲಕರಣೆಗಳನ್ನು ಇಟ್ಟು, ಭತ್ತ, ರಾಗಿ, ಮುಂತಾದ ಧಾನ್ಯಗಳಿಗೆ ಪೂಜೆ ಸಲ್ಲಿಸಲಾಯಿತು. ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ರತ್ನಮ್ಮ, ಮುಖೋಪಾಧ್ಯಾಯರಾದ ಅನಂದಪ್ಪ ಕಾರ್ಯಕ್ರಮದಲ್ಲಿ ಇದ್ದರು.