ಮಡಿಕೇರಿ ಜ.22 NEWS DESK : ಮಡಿಕೇರಿ ಡಿವೈಎಸ್ಪಿಯಾಗಿದ್ದ ಮಹೇಶ್‍ಕುಮಾರ್ ಅವರು ವರ್ಗಾವಣೆಗೊಂಡಿದ್ದಾರೆ. ತೆರವಾದ ಅವರ ಸ್ಥಾನಕ್ಕೆ ಪಿ.ಎ. ಸೂರಜ್ ನೇಮಕಗೊಂಡಿದ್ದಾರೆ. ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿಯವರಾಗಿರುವ ಪೆಮ್ಮಂಡ ಎ.ಸೂರಜ್ ಅವರು ಈ ಹಿಂದೆ ಚಾಮರಾಜನಗರದಲ್ಲಿ ರಾಜ್ಯ ಗುಪ್ತ ವಾರ್ತೆ ವಿಭಾಗದಲ್ಲಿ ಸಹಾಯಕ ನಿರ್ದೇಶಕ (ಡಿವೈಎಸ್ಪಿ) ಆಗಿದ್ದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಸೂರಜ್, ಎಸ್ಪಿಯವರ ನಾಯಕತ್ವದಲ್ಲಿ ಹಿಂದಿನ ಡಿವೈಎಸ್ಪಿಯವರು ಮಾಡಿದ್ದ ಒಳ್ಳೆಯ ಕೆಲಸಗಳನ್ನು ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು. ಮಡಿಕೇರಿ ಡಿವೈಎಸ್‍ಪಿಯಾಗಿದ್ದ ಎಸ್.ಮಹೇಶ್ ಕುಮಾರ್ ಅವರನ್ನು ವೀರಾಜಪೇಟೆಗೆ ವರ್ಗಾವಣೆ ಮಾಡಲಾಗಿದ್ದು, ವೀರಾಜಪೇಟೆ ಡಿವೈಎಸ್‍ಪಿ ಆರ್. ಮೋಹನ್‍ಕುಮಾರ್ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಮಾಡಲಾಗಿದೆ.