
ಮಡಿಕೇರಿ ಜ.24 NEWS DESK : ಭಾಗಮಂಡಲ ಗ್ರಾಮ ಪಂಚಾಯತಿ ವತಿಯಿಂದ 8 ಅಂಗನವಾಡಿ ಕೇಂದ್ರಗಳಿಗೆ ಕೊಡುಗೆ ನೀಡಲಾಯಿತು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಾಂಡ ಸವಿತ ಕೀರ್ತನ್ ಕೆಲವು ದಿನಗಳ ಹಿಂದೆ ಕಾರ್ಯಕರ್ತೆಯರ ಮೂಲಕ ಅಂಗನವಾಡಿ ಕೇಂದ್ರಕ್ಕಾಗಿ ಗ್ರಾಮ ಪಂಚಾಯತಿಗೆ ಬೇಡಿಕೆಗಳನ್ನು ಸಲ್ಲಿಸಿದರು. ಬೇಡಿಕೆಗೆ ಸ್ವಂದಿಸಿ ಭಾಗಮಂಡಲ, ತಾವೂರು-1 ತಾವೂರು-2, ಚೇರಂಗಾಲ-1, ಚೇರಂಗಾಲ-2, ಕೋರಂಗಾಲ, ತಲಕಾವೇರಿ, ತಣ್ಣಿಮಾನಿ ಸೇರಿದಂತೆ 8 ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯತಿಯಿಂದ ನೀರಿನ ಫಿಲ್ಟರ್, ಮಕ್ಕಳ ಕುರ್ಚಿ, ಮಕ್ಕಳ ಹಾಸಿಗೆ, ಚಾಪೆ, ಬೆಡ್ ಶೀಟ್‍ಗಳನ್ನು ವಿತರಿಸಲಾಯಿತು. ಅಧ್ಯಕ್ಷರಾದ ಕಾಳನ ಎ.ರವಿ ಮಾತನಾಡಿ, ಅಂಗನವಾಡಿ ಅಭಿವೃದ್ಧಿಗೆ ಸದಾ ಸಹಕರಿಸುವುದಾಗಿ ಭರವಸೆ ನೀಡಿದರು. ಕೇಂದ್ರದ ಅಭಿವೃದ್ಧಿಗೆ ಎಲ್ಲಾ ಸೇರಿ ಶ್ರಮಿಸಬೇಕಾಗಿ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗಮಂಡಲ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಗಂಗಮ್ಮ, ಸದಸ್ಯರಾದ ದಂಡಿನ ಜಯಂತ, ನಿತ್ಯಾನಂದ, ಸಿರಕಜೆ ನಾಗೇಶ್, ಪೆಮಿತಾ, ದುರ್ಗಾವತಿ, ಶಶಿಕಲಾ, ವೀಣಾ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದ, ಅಂಗನವಾಡಿ ಶಿಕ್ಷಕರಾದ ಶೋಭಾ, ಹೇಮಾವತಿ, ಉಮೈಮ, ಗೀತಾ, ಪ್ರಸದಿನಿ, ದೇವಿಕಾ, ರಕ್ಷಿತಾ, ಘನಶ್ರೀ ಹಾಜರಿದ್ದರು.









