ಮಡಿಕೇರಿ ಜ.27 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್ ಧ್ವಜಾರೋಹಣ ಮಾಡಿದರು. ನಂತರ ಗಣ್ಯರು ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದಿನದ ಮಹತ್ವದ ಕುರಿತು. ಈ ಸಂದರ್ಭ ಸೇವಾದಳದ ಜಿಲ್ಲಾಧ್ಯಕ್ಷ ಹಾಗೂ ಮೂಡ ಸದಸ್ಯ ಕಾನೇಹಿತ್ಲು ಮೊಣ್ಣಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಗೌರವ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮೂಡ ಸದಸ್ಯರಾದ ಆರ್.ಪಿ.ಚಂದ್ರಶೇಖರ್, ನಗರಸಭೆ ನಾಮ ನಿರ್ದೇಶಕ ಸದಸ್ಯ ಸದಾಮುದ್ದಪ್ಪ, ಮಾಜಿ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ಮಾಜಿ ನಗರಸಭಾ ಸದಸ್ಯರಾದ ಶ್ರೀಮತಿ ಬಂಗೇರ, ಮಾಜಿ ನಗರಸಭೆ ಉಪಾಧ್ಯಕ್ಷರಾದ ಲೀಲಾಶೇಷಮ್ಮ, ಪ್ರಮುಖರಾದ ಕವನ್ ಕೊತೋಳಿ, ನಜೀರ್ ಅಹ್ಮದ್, ಹಬೀಬ್ ಅಹಮದ್, ಸುಬ್ರಮಣಿ, ಸುನಂದ, ಉಷಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.