


ಮಡಿಕೇರಿ ಜ.28 NEWS DESK : ಶಿರಂಗಾಲ ಗ್ರಾ.ಪಂ ವತಿಯಿಂದ ಶಿರಂಗಾಲ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಅಮೃತ ಗ್ರಾಮ ಪಂಚಾಯತಿ ಯೋಜನೆಯ ಅಡಿಯ ರೂ. 2.68 ಲಕ್ಷದ ಹಣದಲ್ಲಿ ವಿವಿಧ ಬಗೆಯ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತಾನಾಡಿ, ಸರಕಾರದ ವಿವಿಧ ಯೋಜನೆಯ ಭಾಗಗಳಲ್ಲಿ ಒಂದಾದ ಅಮೃತ ಗ್ರಾಮ ಪಂಚಾಯತಿ ಯೋಜನೆಯ ಅನುದಾನವು ದೊರೆತ ಹಿನ್ನೆಲೆಯಲ್ಲಿ ಅದರ ಸ್ವಲ್ಪ ಭಾಗದ ಹಣವನ್ನು ಉಪಯೋಗಿಸುವ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಅನುಕೂಲವಾಗುವಂತೆ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಿ 7 ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ. ಅದರ ಜೊತೆಯಲ್ಲಿ ವ್ಯಾಪ್ತಿಯ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ಹೆಚ್.ಎಸ್.ಬಸವರಾಜ್, ಎಂ.ಎನ್.ಧರ್ಮಪ್ಪ, ಪ್ರದೀಪ್, ಶ್ರೀಕಾಂತ್, ಸರಿತಾ, ಭಾಗ್ಯರತಿ, ಗೀತಾ, ಲಕ್ಷ್ಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿ.ಆರ್.ಹೇಮಲತಾ, ಕಾರ್ಯದರ್ಶಿ ಕೆ.ಸಿ.ರವಿ ಸೇರಿದಂತೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.