ಸುಂಟಿಕೊಪ್ಪ ಜ.28 NEWS DESK : ಮಾದಾಪರ ಹೋಬಳಿಯಲ್ಲಿ ಸರಕಾರದ ವಿಶೇಷದ ಅನುದಾನ 44 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಶಾಸಕ ಡಾ.ಮಂತರ್ಗೌಡ ಹೇಳಿದರು. ಮಾದಾಪುರ ಜಂಬೂರು ಬಾಣೆ, ಇಗೋಡ್ಲು, ಆಶ್ರಯ ಕಾಲೋನಿ ಸಂಪರ್ಕ ರಸ್ತೆಗೆ ಶಾಸಕರ ನಿಧಿಯಿಂದ 10 ಲಕ್ಷ ರೂ ಯೋಜನೆಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು, ಮಾದಾಪುರ ವಿಭಾಗದ ಜನರ ಬೇಡಿಕೆಯಂತೆ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಮುಖ್ಯ ಮಂತ್ರಿಗಳು ನನ್ನ ಕ್ಷೇತ್ರಕ್ಕೆ ರೂ.19 ಕೋಟಿ ಅಭಿವೃದ್ಧಿ ಕೆಲಸ ಕಾರ್ಯಕ್ಕೆ ಬಿಡುಗಡೆಗೊಳಿಸಿದ್ದಾರೆ. ಜನರ ಆಶೋತ್ತರಗಳನ್ನು ಈಡೇರಿಸುವುದೇ ನಮ್ಮ ಸರಕಾರದ ಗುರಿಯಾಗಿದೆ ಎಂದು ಶಾಸಕರು ಹೇಳಿದರು. ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ, ಮಾದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಮೇದೂರು ಹರೀಶ ಸುಬ್ಬಯ್ಯ, ಮಾದಾಪುರ ಬೂತ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್, ಜಂಬೂರು ಕಾಂಗ್ರೆಸ್ ಅಧ್ಯಕ್ಷ ಅಜೀಜ್, ರಿಯಾಜ್ ಮಾದಾಪುರ ಗ್ರಾ.ಪಂ ಉಪಾಧ್ಯಕ್ಷ ಸುರೇಶ್ ಬಾವೆ, ಜಂಬೂರು ವಿಭಾಗದ ಗ್ರಾ.ಪಂ ಸದಸ್ಯ ಪಿ.ಡಿ.ಅಂತೋಣಿ(ತಂಗಚ್ಚ) ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಗಣೇಶ, ಮೊದಲಾದವರು ಹಾಜರಿದ್ದರು.