


ಬೆಂಗಳೂರು ಫೆ.4 NEWS DESK : ಏರೋ ಇಂಡಿಯಾ-2025 ಆರಂಭಕ್ಕೆ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಸಜ್ಜಾಗುತ್ತಿರುವಂತೆಯೇ, ಸಂದರ್ಶಕರು, ಪ್ರದರ್ಶಕರು ಮತ್ತು ಪ್ರತಿನಿಧಿಗಳು ಮರೆಯಲಾಗದ ಅತ್ಯುತ್ತಮ ಅನುಭವವನ್ನು ಎದುರು ನೋಡಬಹುದಾಗಿದೆ. ಪ್ರಮುಖ ಮೂಲಸೌಕರ್ಯ ನವೀಕರಣಗಳು ಮತ್ತು ಸುಧಾರಿತ ಸೌಕರ್ಯಗಳೊಂದಿಗೆ ಈ ಬಾರಿ ಆವೃತ್ತಿಯು ಹಿಂದೆಂದಿಗಿಂತಲೂ ದೊಡ್ಡದಾಗಿರಲಿದೆ, ಸುಗಮವಾಗಿ ಮತ್ತು ಸಂದರ್ಶಕ ಸ್ನೇಹಿಯಾಗಿರಲಿದೆ ಎಂಬ ಭರವಸೆಯನ್ನು ನೀಡುತ್ತದೆ. ಸುಧಾರಿತ ಮೂಲಸೌಕರ್ಯ ಮತ್ತು ಸಂಚಾರ ನಿರ್ವಹಣೆ :: ಹಿಂದಿನ ಸವಾಲುಗಳನ್ನು ಗುರುತಿಸಿ, ಸರಾಗ ಪ್ರವೇಶ, ಸಂಚಾರ ಮತ್ತು ಸಂಪರ್ಕವನ್ನು ಸುಗಮಗೊಳಿಸಲು ವ್ಯಾಪಕ ಸುಧಾರಣೆಗಳನ್ನು ಮಾಡಲಾಗಿದೆ ಮತ್ತು ರಕ್ಷಣಾ ಸಚಿವಾಲಯ, ಭಾರತೀಯ ವಾಯುಪಡೆ (ಐಎಎಫ್), ಬೆಂಗಳೂರು ಸಂಚಾರ ಪೊಲೀಸ್, ಬಿಬಿಎಂಪಿ, ಎನ್ ಎಚ್ ಎಐ ಮತ್ತು ನಮ್ಮ ಮೆಟ್ರೋದಂತಹ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಅಂಗ ಸಂಸ್ಥೆಗಳ ನಡುವೆ ನಿಕಟ ಸಮನ್ವಯವಿದೆ. ವಾಹನ ದಟ್ಟಣೆಯನ್ನು ತಗ್ಗಿಸಲು ಮತ್ತು ಸ್ಥಳದ ಸುತ್ತಲಿನ ಸಂಚಾರವನ್ನು ಸುಧಾರಿಸಲು ವಾಯುಪಡೆ ನಿಲ್ದಾಣದ ಸುತ್ತಲೂ ಸಂಚಾರ ಹರಿವನ್ನು ಉತ್ತಮಗೊಳಿಸಲು ಸಂಪರ್ಕ ರಸ್ತೆಗಳನ್ನು ಅಗಲೀಕರಣಗೊಳಿಸಲಾಗಿದೆ. ಸಂಚಾರ ಪೊಲೀಸರ ಸಹಯೋಗದೊಂದಿಗೆ ರಿಯಲ್ ಟೈಮ್ ಸಂಚಾರ ಮೇಲ್ವಿಚಾರಣೆ ಕೈಗೊಳ್ಳಲಾಗುವುದು, ಇದರಿಂದಾಗಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ವಿವಿಧ ನಗರ ಸ್ಥಳಗಳಿಂದ ಯಲಹಂಕ ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸಲು ರಕ್ಷಣಾ ಸಚಿವಾಲಯವು ಎಸಿ ವೋಲ್ವೋ ಶಟಲ್ ಬಸ್‌ಗಳನ್ನು ಗುತ್ತಿಗೆ ಪಡೆದುಕೊಂಡಿದೆ. ವಾಹನ ದಟ್ಟಣೆ ಉಂಟಾಗುವ ಪ್ರದೇಶ (ಚೋಕ್ ಪಾಯಿಂಟ್‌ಗಳನ್ನು) ಗುರುತಿಸಲು ಮತ್ತು ಆ ಸಮಸ್ಯೆ ಪರಿಹರಿಸಲು ಜಂಟಿ ವೈಮಾನಿಕ ಸಮೀಕ್ಷೆಗಳನ್ನು ನಡೆಸಲಾಗಿದೆ, ಇದರ ಪರಿಣಾಮವಾಗಿ ವಿವಿಧ ವರ್ಗದ ಸಂದರ್ಶಕರು, ಪ್ರದರ್ಶಕರು ಮತ್ತು ಅಧಿಕಾರಿಗಳಿಗೆ ಅಗಲವಾದ ಪ್ರವೇಶ ರಸ್ತೆಗಳು ಮತ್ತು ಮೀಸಲಾದ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಮಾಡಲಾಗಿದೆ, ಇದರಿಂದಾಗಿ ಅಡಚಣೆಗಳು ಕಡಿಮೆಯಾಗಲಿವೆ. ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧತೆ :: ಅನಧಿಕೃತ ಡ್ರೋನ್ ಚಟುವಟಿಕೆಯನ್ನು ನಿರ್ವಹಿಸಲು ನಿಗ್ರಹ ಕ್ರಮಗಳೊಂದಿಗೆ ಕೆಂಪು ಡ್ರೋನ್ ವಲಯಗಳನ್ನು ಗೊತ್ತುಪಡಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ. ತ್ವರಿತ ಸಹಾಯ ಮತ್ತು ತುರ್ತು ಬೆಂಬಲವನ್ನು ಒದಗಿಸಲು ಕ್ಷಿಪ್ರ ಮೊಬೈಲ್ ಘಟಕಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲಾಗುವುದು. ಪ್ರಾಯೋಗಿಕ ಮತ್ತು ಕಾರ್ಯಗತಗೊಳಿಸಬಹುದಾದ ಆಕಸ್ಮಿಕ ಯೋಜನೆಗಳನ್ನು ಖಾತ್ರಿಪಡಿಸಿಕೊಳ್ಳಲು ಬಹು ಸಂಸ್ಥೆಗಳೊಂದಿಗೆ ನಿರಂತರ ಅಣಕು ಅಭ್ಯಾಸಗಳನ್ನು ನಡೆಸಲಾಗುತ್ತಿದೆ.
ಪ್ರದರ್ಶಕರು ಮತ್ತು ಸಂದರ್ಶಕರ ಅನುಭವ ವೃದ್ದಿ: ಪ್ರದರ್ಶಕರು ಮತ್ತು ವ್ಯಾಪಾರ ಪ್ರತಿನಿಧಿಗಳಿಗೆ ಉತ್ತಮ ಅನುಭವ ಲಭ್ಯವಾಗುವಂತೆ ಮಾಡಲು, ಪ್ರದರ್ಶನ ಪ್ರದೇಶವನ್ನು ಹಲವಾರು ಪ್ರಮುಖ ನವೀಕರಣಗಳೊಂದಿಗೆ ಮಾರ್ಪಾಡು ಮಾಡಲಾಗಿದೆ.
ಎ) ಹೆಚ್ಚಿನ ಪ್ರದರ್ಶಕರು ಮತ್ತು ಸಂದರ್ಶಕರಿಗೆ ಆರಾಮವಾಗಿ ಸ್ಥಳಾವಕಾಶ ಕಲ್ಪಿಸಲು ವಿಸ್ತರಿಸಿದ ಮತ್ತು ಉತ್ತಮ ಗಾಳಿ ಬೆಳಕು ಇರುವ ಪ್ರದರ್ಶನ ಸಭಾಂಗಣಗಳು.
(ಬಿ) ಪ್ರದರ್ಶನದ ಜಾಗದಲ್ಲಿ ಸುಧಾರಿತ ಆಸನ ಮತ್ತು ವಿಶ್ರಾಂತಿ ವಲಯಗಳು.
(ಸಿ) ಇಂದಿರಾ ಕ್ಯಾಂಟೀನ್‌ಗಳು (ಪಾರ್ಕಿಂಗ್ ಪ್ರದೇಶಗಳಲ್ಲಿ) ಸೇರಿದಂತೆ ಹೆಚ್ಚುವರಿ ಫುಡ್ ಕೋರ್ಟ್ ಗಳು ಮತ್ತು ಉಪಹಾರ ಗೂಡಂಗಡಿಗಳನ್ನು ತೆರೆಯಲಾಗಿದೆ.
(ಡಿ) ಸುಲಭ ಸಂಚಾರಕ್ಕಾಗಿ ಮಾರ್ಗವನ್ನು ಹುಡುಕುವುದಕ್ಕೆ ಅನುಕೂಲವಾಗುವ ಸಂಕೇತಗಳು.
(ಇ) ಸಂದರ್ಶಕರ ಅನುಕೂಲಕ್ಕಾಗಿ ಕಳೆದುಹೋದ ಮತ್ತು ಪತ್ತೆಯಾದವರಿಗಾಗಿ ಕೌಂಟರ್‌ಗಳು ಮತ್ತು ಎಟಿಎಂ ಕಿಯೋಸ್ಕ್‌ಗಳು.
(ಎಫ್) ಹಲವೆಡೆ ಕುಡಿಯುವ ನೀರಿನ ಕೇಂದ್ರಗಳು, ವೈದ್ಯಕೀಯ ಸಹಾಯ ಕೇಂದ್ರಗಳು ಮತ್ತು ವೈದ್ಯಕೀಯ ಸ್ಥಳಾಂತರಿಸುವಿಕೆ ಸೇರಿದಂತೆ ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಾದ ಪ್ರಾಥಮಿಕ ಹೃದಯಚಿಕಿತ್ಸೆ ಸಹಾಯ ಕೇಂದ್ರ.
ಬಹು ಹಂತದ ಭದ್ರತಾ ಕ್ರಮಗಳು: ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುವ ಎಲ್ಲರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು, ಗೃಹ ಸಚಿವಾಲಯ, ಬೆಂಗಳೂರು ಪೊಲೀಸ್, ಸಿಐಎಸ್ಎಫ್ ಮತ್ತು ಗುಪ್ತಚರ ಸಂಸ್ಥೆಗಳ ಸಹಯೋಗದೊಂದಿಗೆ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ. ಭದ್ರತೆಗಾಗಿ ಕೈಗಿಒಂಡಿರುವ ಕ್ರಮಗಳಲ್ಲಿ ಇವು ಒಳಗೊಂಡಿವೆ. ಅವುಗಳೆಂದರೆ ::
(ಎ)ಸುಧಾರಿತ ಭದ್ರತಾ ಶಿಷ್ಟಾಚಾರಗಳು ಮತ್ತು ವೇಗದ ಪ್ರವೇಶ ನಿಯಂತ್ರಣ.
(ಬಿ) ಭದ್ರತಾ ಕಾಳಜಿಗಳಿಗೆ ರಿಯಲ್ ಟೈಮ್ ಪ್ರತಿಕ್ರಿಯೆಗಳಿಗಾಗಿ ಕಾರ್ಯಾಚರಣಾ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ.
(ಸಿ) ಪರಿಸ್ಥಿತಿಯನ್ನು ಅರಿಯಲು ದಿನಗಳ 24 ಗಂಟೆಗಳೂ ಕಾರ್ಯನಿರ್ವಹಿಸುವ 24/7 ಸಿಸಿಟಿವಿ ಮೇಲ್ವಿಚಾರಣೆ.
(ಡಿ) ಸಂದರ್ಶಕರು, ಪ್ರದರ್ಶಕರು ಮತ್ತು ವಿಐಪಿಗಳಿಗಾಗಿ ಮೀಸಲಾದ ತಪಾಸಣಾ ವಲಯಗಳು.
(ಇ) ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ ಮತ್ತು ಅಗ್ನಿ ಸುರಕ್ಷತಾ ಸಮಿತಿಗಳು.
ಸಂಪರ್ಕ ಮತ್ತು ಡಿಜಿಟಲ್ ಮೂಲಸೌಕರ್ಯ :: ಹಿಂದಿನ ಸಂಪರ್ಕ ಸವಾಲುಗಳನ್ನು ಪರಿಹರಿಸಲು ಎಲ್ಲಾ ದೂರಸಂಪರ್ಕ ಸೇವಾ ಪೂರೈಕೆದಾರರು ತಡೆರಹಿತ ಸಂವಹನಕ್ಕಾಗಿ ತಾತ್ಕಾಲಿಕ ಮೊಬೈಲ್ ಟವರ್‌ಗಳು ಮತ್ತು ನೆಟ್‌ವರ್ಕ್ ಬೂಸ್ಟರ್‌ಗಳನ್ನು ನಿಯೋಜಿಸುತ್ತಿದ್ದಾರೆ. ಲೈವ್ ಅಪ್‌ಡೇಟ್‌ಗಳು, ಸಂಚಾರಕ್ಕೆ ಸಹಕರಿಸುವ ಮತ್ತು ಕಾರ್ಯಕ್ರಮದ ವೇಳಾಪಟ್ಟಿಯನ್ನು ಒದಗಿಸಲು ಮೀಸಲಾದ ಏರೋ ಇಂಡಿಯಾ 2025 ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಆರಂಭಿಸಲಾಗಿದೆ. ಏಜೆನ್ಸಿಗಳ ನಡುವೆ ಸಮನ್ವಯಕ್ಕಾಗಿ ಸುರಕ್ಷಿತ ಡಿಜಿಟಲ್ ಸಂವಹನ ಚಾನೆಲ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ, ಕಾರ್ಯಕ್ರಮದ ಸಮಯದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಹೆಚ್ಚಿದ ವಿದ್ಯುತ್ ಬೇಡಿಕೆಗಳನ್ನು ಬೆಂಬಲಿಸಲು ನಿಬಂಧನೆಗಳನ್ನು ಮಾಡಲಾಗಿದೆ.
ವೈಮಾನಿಕ ಜಾಗದ ನಿರ್ವಹಣೆ ಮತ್ತು ಪ್ರಾತ್ಯಕ್ಷಿಕೆಗಳು :: ಏರೋ ಇಂಡಿಯಾ ಪ್ರದರ್ಶನಗಳು ಮತ್ತು ವಿಮಾನಗಳ ಸಂಚಾರಕ್ಕೆ ಏರೋ ಇಂಡಿಯಾ 2025 ರ ಪ್ರಮುಖ ಅಂಶಗಳಾಗಿವೆ. ಎಎಐ ಮತ್ತು ಎಚ್ ಎಎಲ್ ನೊಂದಿಗೆ ಸಮನ್ವಯದೊಂದಿಗೆ ಐಎಎಫ್ ಗೆ ಮೀಸಲಾದ ವಾಯುಪ್ರದೇಶ ನಿರ್ವಹಣಾ ಯೋಜನೆಯನ್ನು ರೂಪಿಸಿದೆ. ಅವುಗಳೆಂದರೆ ::
(ಎ)ನಿಗದಿತ ಪ್ರದರ್ಶನಗಳ ಸಮಯದಲ್ಲಿ ಸುರಕ್ಷತೆಯನ್ನು ಕಾಪಾಡಲು ಏರೋ ಇಂಡಿಯಾ ಫೋರ್ಸ್ ಸ್ಟೇಷನ್ ಯಲಹಂಕದ ಸುತ್ತಲೂ ತಾತ್ಕಾಲಿಕ ಹಾರಾಟ ನಿರ್ಬಂಧಿಸಲಾಗಿದೆ.
(ಬಿ) ಪ್ರದರ್ಶದನದಲ್ಲಿ ಭಾಗವಹಿಸುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಕಾರ್ಯತಂತ್ರದ ವಿಮಾನ ಪಾರ್ಕಿಂಗ್ ಮತ್ತು ಇಂಧನ ತುಂಬುವ ಯೋಜನೆಗಳು.
ವ್ಯಾಪಾರ ವಹಿವಾಟು ಮತ್ತು ನಾವೀನ್ಯತೆ ಬೆಂಬಲ :: ಏರೋ ಇಂಡಿಯಾ ಸಹಯೋಗಗಳಿಗೆ ಮತ್ತು ಬಿ2ಬಿ, ಜಿ2ಬಿ ಸಂವಹನಗಳಿಗೆ ಅನುಕೂಲವಾಗುವಂತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸಲು ದುಂಡು ಮೇಜಿನ ಚರ್ಚೆಗಳನ್ನು ಆಯೋಜಿಸಲು ವೇದಿಕೆಯನ್ನು ಒದಗಿಸುತ್ತದೆ. ಸ್ಥಳೀಯ ನಾವೀನ್ಯತೆಗಳನ್ನು ಪ್ರಸ್ತುತಪಡಿಸಲು ಜಾಗತಿಕ ವೇದಿಕೆಯನ್ನು ಒದಗಿಸುವ ಮೂಲಕ ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್ ಎಂಇ ಗಳನ್ನು ಬೆಂಬಲಿಸಲು ವಿಶೇಷ ಗಮನ ನೀಡಲಾಗುತ್ತಿದೆ.
ಸುಸ್ಥಿರತೆ ಉಪಕ್ರಮಗಳು :: ಏರೋ ಇಂಡಿಯಾ 2025 ಸುಸ್ಥಿರತೆಗೆ ಬದ್ಧವಾಗಿದೆ ಮತ್ತು ಅದರ ಕಾರ್ಯಕ್ರಮಗಳಲ್ಲಿ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಒಳಗೊಂಡಿದೆ:-
(ಎ) ಮಾಲಿನ್ಯವನ್ನು ತಗ್ಗಿಸಲು ಮತ್ತು ಪಾದಚಾರಿ ಸೌಕರ್ಯವನ್ನು ಹೆಚ್ಚಿಸಲು ವಾಹನಗಳ ಸಂಚಾರವನ್ನು ಕಡಿಮೆ ಮಾಡಲಾಗಿದೆ.
(ಬಿ) ಪ್ರದರ್ಶನ ಸ್ಥಳದಲ್ಲಿ ಸಂದರ್ಶಕರ ಸುಗಮ ಸಂಚಾರಕ್ಕಾಗಿ 100 ಕ್ಕೂ ಅಧಿಕ ಇ ಕಾರ್ಟ್‌ಗಳ ವಿಶೇಷ ಬಳಕೆ.
ಸಿ) ಹೆಚ್ಚಿನ ಸಂಖ್ಯೆಯ ಮರುಬಳಕೆ ಬಿನ್‌ಗಳು, ತ್ಯಾಜ್ಯ ವಿಂಗಡಣೆ ವಲಯಗಳು ಮತ್ತು ತ್ಯಾಜ್ಯವನ್ನು ಸಕಾಲಿಕವಾಗಿ ವಿಲೇವಾರಿ ಮಾಡುವುದು ಸೇರಿದಂತೆ ಸಮಗ್ರ ತ್ಯಾಜ್ಯ ನಿರ್ವಹಣೆ.
ಪರಿಸಮಾಪ್ತಿ : : ಈ ಬಹು-ಸಂಸ್ಥೆಗಳ ಸಹಯೋಗಗಳೊಂದಿಗೆ ಏರೋ ಇಂಡಿಯಾ 2025 ಈವರೆಗಿನ ಅತ್ಯಂತ ಸುಸಂಘಟಿತ ಮತ್ತು ಉತ್ತಮ ಸಂಘಟಿತ ಆವೃತ್ತಿಗಳಲ್ಲಿ ಒಂದಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳ ನಡುವಿನ ಪೂರ್ವಭಾವಿ ಸಹಯೋಗವು ಏರೋ ಇಂಡಿಯಾ 2025 ಭವಿಷ್ಯದ ಎಲ್ಲಾ ವೈಮಾನಿಕ ಪ್ರದರ್ಶನಗಳಿಗೆ ಮಾನದಂಡ ನಿಗದಿಪಡಿಸುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ.