



ಮಡಿಕೇರಿ ಫೆ.8 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲ್ಲೂಕು ಕುಂದಚೇರಿ ಗ್ರಾಮದ ಅಲ್ಲಂಗಡ, ಪೊನ್ನೆಟ್ಟಿ ಹಾಗೂ ಬಾರಿಕೆ ಕುಟುಂಬಸ್ಥರ ಮನೆಗಳಿಗೆ ತೆರಳುವ ರಸ್ತೆಯನ್ನು ಪೂರ್ಣಗೊಳಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ಅನುದಾನದಲ್ಲಿ ಮಂಜೂರಾದ ಕಾಮಗಾರಿಯನ್ನು ಕೆ.ಆರ್.ಡಿ.ಸಿ.ಎಲ್ ಮೂಲಕ ಪೂರ್ಣಗೊಳಿಸಲಾಯಿತು. ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಸಲುವಾಗಿ ಅಲ್ಲಂಗಡ, ಪೊನ್ನೆಟ್ಟಿ ಹಾಗೂ ಬಾರಿಕೆ ಕುಟುಂಬಸ್ಥರು ಶಾಸಕರಿಗೆ ಹಾಗೂ ಅನುದಾನಕೊಡಿಸುವಲ್ಲಿ ಸಹಕರಿಸಿದ ಪಂಚಾಯಿತಿಯ ಪ್ರಮುಖರಿಗೆ ಹಾಗೂ ಪಕ್ಷದ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಮಾತನಾಡಿದ ಕುಟುಂಬಸ್ಥರು ಮಳೆಗಾಲದಲ್ಲಿ ತಮ್ಮ ಭಾಗದ ಹಿರಿಯರಿಗೆ ಹಾಗೂ ಶಾಲಾ ಮಕ್ಕಳಿಗೆ ಓಡಾಡಲು ಈ ರಸ್ತೆ ಅತ್ಯಂತ ಕಠಿಣವಾಗಿತ್ತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಪೊನ್ನಣ್ಣ ಅವರಲ್ಲಿ ತಾವು ಮಾಡಿದ ಮನವಿಯನ್ನೇ ಪರಿಗಣಿಸಿ ತಕ್ಷಣವೇ ಕಾಮಗಾರಿಗೆ ಅನುದಾನ ಮಂಜೂರು ಮಾಡಿರುವುದು ಶ್ಲಾಘನೀಯ ಎಂದರು.