ಮಡಿಕೇರಿ ಫೆ.13 NEWS DESK : ಭಾಗಮಂಡಲ ಸಮೀಪದ ಕೋರಂಗಾಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆ, ಛದ್ಮವೇಷ ಸ್ಪರ್ಧೆ ಹಾಗೂ ವಿಜ್ಞಾನ ಮಾದರಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಸಂಸ್ಥೆಯ ಕಾರ್ಯದರ್ಶಿ ಮಿಥುನ್ ಚಂಗಪ್ಪ ಹಾಗೂ ಮುಖ್ಯೋಪಾಧ್ಯಾಯರಾದ ಶ್ವೇತನ್ ಚಂಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳ ಸಂತೆಯನ್ನು ಅಯ್ಯಂಗೇರಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದಿಯನ ಮಿಥುನ್ ಉದ್ಘಾಟಿಸಿದರೆ, ವಿಜ್ಞಾನ ಮಾದರಿ ಪ್ರದರ್ಶನವನ್ನು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿಜ್ಞಾನ ಉಪನ್ಯಾಸಕಿ ಪೇರಿಯನ ಸಾಧನ ಉದ್ಘಾಟಿಸಿದರು. ಮಕ್ಕಳಿಗಾಗಿ, ಛದ್ಮವೇಷ ಸ್ಪರ್ಧೆ, ಪೋಷಕರಿಗೆ ವಿವಿಧ ಕ್ರೀಡಾಕೂಟುಗಳು ನಡೆದವು. ಕರಾಟೆ ಶಿಕ್ಷಕ ನಂಜುಂಡ, ಯೋಗ ಶಿಕ್ಷಕ ನಾಗರಾಜ್ ಹಾಗೂ ಎಲ್ಲಾ ಶಿಕ್ಷಕ ವೃಂದದವರ ಉಪಸ್ಥಿತಿಯಲ್ಲಿ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿ ಎಂ.ಎ.ಹಿಬಾ ಫಾತಿಮಾ ತಂಡ ಪ್ರಾರ್ಥನೆ ನೆರವೇರಿಸಿದರೆ, ಶಾಲೆಯ ಶಿಕ್ಷಕಿ ಎಂ.ಎ.ಚಿತ್ರ ಹಾಗೂ ಮಣವಟ್ಟಿರ ದಯಾ ಚಿನ್ನಪ್ಪ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಮಿಥುನ್ ಚಂಗಪ್ಪ ವಂದನಾರ್ಪಣೆ ನೆರವೇರಿಸಿದರು.











