ಮಡಿಕೇರಿ ಫೆ.13 NEWS DESK : ಜೆಸಿಐ ನ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 14ನೇ ಅಧ್ಯಕ್ಷರಾಗಿ ತೀತಮಾಡ ಡಿ.ನಿತನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಚಿಂಡಮಾಡ ಜೆ.ಚೇತನ್, ಖಜಾಂಚಿಯಾಗಿ ಚೋನಿರ ಬಿ.ಸೋಮಣ್ಣ ಹಾಗೂ ಸಹ ಕಾರ್ಯದರ್ಶಿಯಾಗಿ ತೀತಮಾಡ ಎಸ್.ಸುಜೀತ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ತೀತಮಾಡ ಬಿ.ಅಯ್ಯಪ್ಪ (ಘಟಕ), ಅಪ್ಪಡೇರಂಡ ಎಂ.ಬೋಪಣ್ಣ (ವ್ಯಾಪಾರ), ಪೆಮ್ಮಂಡ ಎ.ಸೋಮಣ್ಣ (ಪಿಆರ್ ಮತ್ತು ಮಾರ್ಕೆಟಿಂಗ್), ಕೊಟ್ರಮಾಡ ನಿತಿನ್ (ತರಬೇತಿ), ಬೊಜ್ಜಂಗಡ ಎಂ.ಚಂಗಪ್ಪ (ಕಮ್ಯೂನಿಟಿ ಡೆವಲಪ್‍ಮೆಂಟ್), ಚೇಂದಂಡ ಟಿ.ದೀಪಕ್ (ಬೆಳವಣಿಗೆ ಹಾಗೂ ಅಭಿವೃದ್ಧಿ) ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಟಿ.ಎಸ್.ಅಕ್ಷಯ್, ಬೊಜ್ಜಂಗಡ ಸಂಪತ್, ತೀತಿಮಾಡ ಲಿಖಿತ್, ತೀತಿಮಾಡ ಬೋಪಣ್ಣ, ತೀತಿಮಾಡ ಗಿರೀಶ್ ಹಾಗೂ ಜೂನಿಯರ್ ಜೆಸಿಯಾಗಿ ತಸ್ವಿ ನಿತಿನ್ ನೇಮಕಗೊಂಡಿದ್ದಾರೆ. 2024ನೇ ಸಾಲಿನ ಅಧ್ಯಕ್ಷ ಪೆಮ್ಮಂಡ ಪಿ.ಮಂಜು ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೂರ್ವಾಧ್ಯಕ್ಷರಾದ ಅಪ್ಪಂಡೇರಂಡ ದಿನು ದೇವಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪೂರ್ವಾಧ್ಯಕ್ಷರುಗಳಾದ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಹಾಗೂ ಬಿ.ಇ.ಕಿರಣ್ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದರು. ಮಾ.7 ರಂದು ಗೋಣಿಕೊಪ್ಪದ ಸ್ಪೈಸ್ ರಾಕ್ ಹೊಟೇಲ್ ಸಭಾಂಗಣದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.











