![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.15 NEWS DESK : ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ನಾಗದೇವರ ನೂತನ ಆಲಯ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನಾಗ ದರ್ಶನ ಫೆ.22 ಮತ್ತು 23 ರಂದು ನಡೆಯಲಿದೆ. ಕ್ಷೇತ್ರ ತಂತ್ರಿಗಳಾದ ಕೆ.ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಫೆ.22 ರಂದು ಸಂಜೆ 6 ಗಂಟೆಯಿಂದ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾ ಸಂಕಲ್ಪ, ಮಾತೃಕಾ ಪೂಜೆ, ಋತ್ವಿಗ್ವರಣೆ, ಪ್ರಸಾದ ಪ್ರತಿಗ್ರಹ, ಸ್ಥಾನ ಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತು ಬಲಿ, ಆಶ್ಲೇಷ ಬಲಿ, ಮಹಾಮಂಗಳಾರತಿ ಜರುಗಲಿದೆ. ಫೆ.23 ರಂದು ಬೆಳಿಗ್ಗೆ 7.30 ರಿಂದ ಗುರುಗಣಪತಿ ಪೂಜೆ, ಗಣಪತಿ ಹೋಮ, 8.36ಕ್ಕೆ ನಾಗದೇವರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಶಾಂತಿಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ನಡೆಯಲಿದ್ದು, 11.30ಕ್ಕೆ ಉಡುಪಿಯ ವೇ.ಬ್ರ.ಶ್ರೀ ಎ.ಸುಬ್ರಮಣ್ಯ ಮಧ್ಯಸ್ಥ ನಾಗಪಾತ್ರಿ ನಾಗದರ್ಶನ ಸೇವೆ ನಡೆಸಿಕೊಡಲಿದ್ದಾರೆ. ನಂತರ ಆಶೀರ್ವಾದ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟ್ ಮತ್ತು ಟ್ರಸ್ಟಿಗಳು ಮನವಿ ಮಾಡಿದ್ದಾರೆ.