ಸುಂಟಿಕೊಪ್ಪ,ಫೆ.18 NEWS DESK : ಮಾದಾಪುರ ಗ್ರೇಡ್ 1 ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಸಭೆಯನ್ನು ಮುಂದೂಡಲಾಯಿತು. ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಲಿಸೋಮಣ್ಣ ಅಧ್ಯಕ್ಷತೆಯಲ್ಲಿ ಕೃಷಿಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಸಭೆಗೆ ಪ್ರಮುಖ ಇಲಾಖೆಗಳಾದ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಆಹಾರ ಇಲಾಖಾಧಿಕಾರಿಗಳು ಗ್ರಾಮಸ್ಥರಾದ ಕೊಪ್ಪತ್ತಂಡ ಗಣೇಶ, ಮಾಜಿ ಸದಸ್ಯ ಮಜೀದ್, ಮಠದ ಗಣೇಶ್, ಮಾಜಿ ಸದಸ್ಯ ಹೆಚ್.ಕೆ.ಸೋಮಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು. ಗ್ರಾಮಸಭೆಗೆ ಹಾಜರಾಗುವಂತೆ 32 ಇಲಾಖೆಗಳಿಗೆ ನೋಟಿಸ್ ಕಳುಹಿಸಲಾಗಿದೆ. ಆದರೆ ಪ್ರಮುಖ ಇಲಾಖೆ ಬಾರದಿರುವುದ್ದರಿಂದ 15 ದಿನದಲ್ಲಿ ಗ್ರಾಮಸಭೆಯನ್ನು ನಡೆಸದಿದ್ದಲ್ಲಿ ಗ್ರಾಮ ಪಂಚಾಯಿತಿ ಮುತ್ತಿಗೆ ಹಾಕಿ ರಸ್ತೆ ತಡೆ ನಡೆಸುವುದಾಗಿ ಸಭೆ ಸೂಚಿಸಿದಾಗ ಸಭೆಗೆ ಆಗಮಿಸಿದ್ದ ಸರ್ವ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ಇದೇ ಸಂದರ್ಭ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಿಗೆ ಸರಬರಾಜು ಗೊಳ್ಳುತ್ತಿರುವ ನಲ್ಲಿ ನೀರು ಕಲುಷಿತ ನೀರು ಸರಬರಾಜುಗೊಳ್ಳುತ್ತಿದ್ದು, ನೀರನ್ನು ಬಾಟಲಿಯಲ್ಲಿ ತಂದು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹನೀಫ್ ಪ್ರದರ್ಶಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷ ಸುರೇಶ್ ಬಾವೆ ಪಿಡಿಒ ಗುಳ್ಳಪ್ಪ ಕೂತಿನರ್, ಸದಸ್ಯರು ಗಳಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ದಮಯಂತಿ, ಶೀಲಾ, ಜ್ಯೋತಿ, ಗಿರೀಶ, ಗೋಪಿ, ನಿರೂಪ, ಮನು ಬಿದ್ದಪ್ಪ, ಮಾನಸ ಹಾಗೂ ಭಾಗೀರಥಿ ಇದ್ದರು.











