



ಮಡಿಕೇರಿ ಫೆ.19 NEWS DESK : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಬಾಗಿತ್ವದಲ್ಲಿ, ಫೆ.23 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ರೋಟರಿ ಜಿಲ್ಲೆ 3181 ಗೆ ಸೇರಿದ ರೋಟರಿ ಕ್ಲಬ್ ತಂಡಗಳ ನಡುವೆ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಮಧುಸೂದನ್, ಫೆ.23 ರಂದು ರೋಟರಿ ಮಿಸ್ಟಿ ಹಿಲ್ಸ್ ನಿಂದ ಇದೇ ಮೊದಲ ಬಾರಿಗೆ ರೋಟರಿ ಜಿಲ್ಲೆ 3181 ನ ರೋಟರಿ ಸದಸ್ಯರಿಗಾಗಿ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಇದೇ ಸಂದಭ೯ ಮಿಸ್ಟಿ ಹಿಲ್ಸ್ ವತಿಯಿಂದ ರೆಡ್ ಕ್ರಾಸ್ ಕೊಡಗು ಮತ್ತು ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು. ರೋಟರಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಸಮಿತಿ ಅಧ್ಯಕ್ಷ ಜಯಂತ್ ಪೂಜಾರಿ ಮಾಹಿತಿ ನೀಡಿ, ಫೆ.23 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಡ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ದೊರಕಲಿದೆ.ಇದೇ ಮೊದಲ ಬಾರಿಗೆ ರೋಟರಿ ಜಿಲ್ಲೆ 3181 ನಿಂದ ಕಬಡ್ಡಿ ಪಂದ್ಯಾವಳಿಆಯೋಜಿತವಾಗಿದ್ದು, ಈ ಮೂಲಕ ರೋಟರಿ ಸಂಸ್ಥೆಯ ಸದಸ್ಯರಲ್ಲಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. ಮೊದಲ ವಷ೯ದ ಪಂದ್ಯಾಟದಲ್ಲಿ ಮಡಿಕೇರಿ, ಶನಿವಾರಸಂತೆ, ಸೋಮವಾರಪೇಟೆ, ಗೋಣಿಕೊಪ್ಪ,ವೀರಾಜಪೇಟೆ, ಆಲೂರು ಸಿದ್ದಾಪುರ, ಪಿರಿಯಾಪಟ್ಟಣ, ಹುಣಸೂರು, ಮೈಸೂರು, ಪುತ್ತೂರು,ಮಂಗಳೂರು, ಸುಳ್ಳ್ಯಾ ಸೇರಿದಂತೆ ವಿವಿಧ ರೋಟರಿ ಸಂಸ್ಥೆಗಳ 15 ತಂಡಗಳು ಪಾಲ್ಗೊಳ್ಳುತ್ತಿದೆ. ಪೈಪೋಟಿಗಿಂತ ಮನೋರಂಜನೆ ಮತ್ತು ಕ್ರೀಡಾಸ್ಪೂತಿ೯ಗೆ ಆದ್ಯತೆಯನ್ನು ನೀಡಲಾಗಿದೆ ಎಂದೂ ಜಯಂತ್ ತಿಳಿಸಿದರು. ರೋಟರಿ ಜಿಲ್ಲಾ ಮಟ್ಟದ ಮಡ್ ಕಬಡ್ಡಿ ಪಂದ್ಯಾವಳಿಯ ಪ್ರಥಮ ಬಹುಮಾನ ವಿಜೇತರಿಗೆ 25 ಸಾವಿರ ರು. ನಗದು, ದ್ವಿತೀಯ ಬಹುಮಾನವಾಗಿ 15 ಸಾವಿರ ರು ನಗದು ಮತ್ತು ತೖತೀಯ ಮತ್ತು ಚತುರ್ಥ ಬಹುಮಾನ ವಾಗಿ ತಲಾ 8000 ಸಾವಿರ ರು. ನಗದು ಹಾಗೂ ವಿಜೇತರಿಗೆ ಆಕಷ೯ಕ ಟ್ರೋಫಿ ನೀಡಲಾಗುತ್ತದೆ. ಎಂದು ಜಯಂತ್ ಪೂಜಾರಿ ಮಾಹಿತಿ ನೀಡಿದರು. ಕನಾ೯ಟಕ ಆಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ನುರಿತ ತಂತ್ರಜ್ಞರು, ತೀಪು೯ಗಾರರು ರೋಟರಿ ಕಬಡ್ಡಿ ಪಂದ್ಯಾವಳಿಗೆ ಸಹಕಾರ ನೀಡುತ್ತಿದ್ದು ಪಂದ್ಯಾವಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಎಲ್ಲಾ ರೀತಿಯ ಸೌಕಯ೯ ಕಲ್ಪಿಸಲಾಗಿದೆ. ಅಂದಾಜು 4 ಲಕ್ಷ ರು. ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ಕಬ್ಬಡಿ ಪಂದ್ಯಾಟದ ಸಂಚಾಲಕರಾದ ಕಪಿಲ್ ತಿಳಿಸಿದರು. ಫೆ.23 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಕಾಯ೯ಕ್ರಮದಲ್ಲಿ ರೋಟರಿ ಜಿಲ್ಲೆ 3181 ನ ಗವನ೯ರ್ ವಿಕ್ರಂದತ್ತ, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ.ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜಾ, ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್, ನಗರಸಭಾ ಪೌರಾಯುಕ್ತ ರಮೇಶ್, ಆಮೇಚೂರ್ ಕಬಡ್ಡಿ ಅಸೋಸಿಯೇಷನ್ ಸೆಕ್ರೆಟರಿ ಹೊಸೋಕ್ಲು ಉತ್ತಪ್ಪ, ರೋಟರಿ ವಲಯ 6 ರ ಸಹಾಯಕ ಗವನ೯ರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಗಂಟೆಗೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ರೋಟರಿ ಜಿಲ್ಲಾ ಗವನ೯ರ್ ವಿಕ್ರಂದತ್ತ ಅವರು ವಿಜೇತ ತಂಡಗಳಗೆ ಬಹುಮಾನ ವಿತರಿಸಲಿದ್ದಾರೆ ಎಂದೂ ಕಪಿಲ್ ಹೇಳಿದರು. ರೋಟರಿ ಮಾಜಿ ಸಹಾಯಕ ಗವನ೯ರ್ ಅನಿಲ್ ಹೆಚ್.ಟಿ. ಮಾತನಾಡಿ, 20 ವಷ೯ಗಳನ್ನು ಪೂರೈಸಿರುವ ರೋಟರಿ ಮಿಸ್ಟಿ ಹಿಲ್ಸ್ ಈವರೆಗೂ 12 ಜಿಲ್ಲಾ ಕಾಯ೯ಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದೆ. ಇದೇ ಮೊದಲ ಬಾರಿಗೆ ಕಬ್ಬಡಿ ಪಂದ್ಯಾವಳಿ ಮೂಲಕ ಕಬ್ಬಡಿಯಲ್ಲಿ ರೋಟರಿ ಸದಸ್ಯರೂ ಪಾಲ್ಗೊಂಡು ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುತ್ತಿದೆ. 86 ರೋಟರಿ ಕ್ಲಬ್ ಗಳಿರುವ ರೋಟರಿ ಜಿಲ್ಲೆ 3181 ನಲ್ಲಿ ಮೊದಲ ಬಾರಿಗೆ ಕಬಡ್ಡಿ ಪಂದ್ಯಾಟ ಪ್ರಾರಂಭಿಸಿರುವ ದಾಖಲೆಯೂ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನದ್ದಾಗಿದೆ ಎಂದರು. ರೋಟರಿ ಕಬಡ್ಡಿ ಪಂದ್ಯಾಟದ ವೀಕ್ಷಣೆಗೆ ಸಾವ೯ಜನಿಕರಿಗೂ ಮುಕ್ತ ಅವಕಾಶ ಇದೆ ಎಂದೂ ಅನಿಲ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನ ಕಬಡ್ಡಿ ಪಂದ್ಯಾವಳಿ ಆಯೋಜಕ ಸಮಿತಿ ಪ್ರಮುಖರಾದ ಮೋಹನ್ ಪ್ರಭು, ಪ್ರಕಾಶ್ ಪೂವಯ್ಯ ಉಪಸ್ಥಿತರಿದ್ದರು.