




ಮಡಿಕೇರಿ NEWS DESK ಫೆ.24 : ಬೇಂಗ್ ನಾಡ್ ಕೊಡವ ಸಮಾಜದ ನೂತನ ಪ್ರವೇಶದ್ವಾರ ಮತ್ತು ಅಡುಗೆ ಮನೆಯನ್ನು ದಾನಿಗಳಾದ ತೇಲಪಂಡ ಪ್ರದೀಪ್ ಪೂವಯ್ಯ ಹಾಗೂ ನೂರೆರ ಮಿಟ್ಟು ಸುಬ್ಬಯ್ಯ ಅವರು ಉದ್ಘಾಟಿಸಿದರು. ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಮಾಜದ ಸದಸ್ಯರು ಮತ್ತಿತರರು ಹಾಜರಿದ್ದರು. *ವಾರ್ಷಿಕ ಮಹಾಸಭೆ* ಇದೇ ಸಂದರ್ಭ ಬೇಂಗ್ ನಾಡ್ ಕೊಡವ ಸಮಾಜದ ವಾರ್ಷಿಕ ಮಹಾಸಭೆ ಬಾಚರಣಿಯಂಡ ದಿನೇಶ್ ಗಣಪತಿ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಮಾಜದ ಸ್ಥಾಪಕ ಅಧ್ಯಕ್ಷರನ್ನು, ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ ಅಧ್ಯಕ್ಷರನ್ನು ಹಾಗೂ ಬೇರೆ ಸಂಘ ಸಂಸ್ಥೆಗಳಲ್ಲಿ ಚುನಾಯಿತರಾಗಿ ಅಧಿಕಾರದಲ್ಲಿರುವ ಸಮಾಜದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಾಪಕ ಅಧ್ಯಕ್ಷ ದಿ.ಕಲ್ಮಾಡಂಡ ಅಯ್ಯಣ್ಣ ಅವರ ಪರವಾಗಿ ಪುತ್ರ ಕೆ.ಎ.ರವಿ ದೇವಯ್ಯ, ಮಾಜಿ ಅಧ್ಯಕ್ಷ ದಿ.ಮಂದಪಂಡ ತಿಮ್ಮಯ್ಯ ಅವರ ಪುತ್ರ ಎಂ.ಟಿ.ಸುಬ್ಬಯ್ಯ, ಮಾಜಿ ಅಧ್ಯಕ್ಷ ದಿ.ಪಟ್ಟಮಾಡ ಜೋಯಪ್ಪ ಅವರ ಪುತ್ರ ಪಿ.ಜೆ.ಗವಿನ್, ಮಾಜಿ ಅಧ್ಯಕ್ಷ ದಿ.ಕಲ್ಮಾಡಂಡ ಕೆ.ಗಣಪತಿ ಅವರ ಪುತ್ರ ಕೆ.ಜಿ.ಕುಟ್ಟಪ್ಪ, ಮಾಜಿ ಅಧ್ಯಕ್ಷರುಗಳಾದ ಕುಟ್ಟೇಟಿರ ಕೆ.ಕುಞಪ್ಪ, ನಾಪಂಡ ಸಿ.ಗಣೇಶ್, ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್, ಬೇಂಗೂರು ಗ್ರಾ.ಪಂ ಅಧ್ಯಕ್ಷರಾದ ಪಟ್ಟಮಾಡ ಮಿಲನ್ ಮುತ್ತಣ್ಣ, ಬೆಂಗಳೂರು ಕೊಡವ ಸಮಾಜದ ಜಂಟಿ ಖಜಾಂಚಿ ಪೊನ್ನಚೆಟ್ಟಿರ ಕೆ.ರಮೇಶ್ ಗಣಪತಿ, ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ಶರಿ ವಿಜಯಕುಮಾರ್, ಮಾಜಿ ಸೈನಿಕರ ಸಂಘದ ಚೇರಂಬಾಣೆ ಅಧ್ಯಕ್ಷ ಅಯ್ಯಂಡ ಬಿ.ಅಯ್ಯಪ್ಪ ಸಭೆಯಲ್ಲಿ ಸನ್ಮಾನಿಸಲ್ಪಟ್ಟರು. ಕೊಡವ ಸಮಾಜದ ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಉಪಾಧ್ಯಕ್ಷ ಕೇಕಡ ಮೊಣ್ಣಪ್ಪ ಸ್ವಾಗತಿಸಿ, ತೇಲಪಂಡ ಲಕ್ಷಿö್ಮ ಪೆಮ್ಮಯ್ಯ ವಂದಿಸಿದರು.