



ಮಡಿಕೇರಿ ಫೆ.24 NEWS DESK : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ರೋಟರಿ ಜಿಲ್ಲಾ ಮಟ್ಟದ ಪ್ರಥಮ ವಷ೯ದ ಕಬ್ಬಡಿ ಪಂದ್ಯಾವಳಿಯಲ್ಲಿ ಮಿಸ್ಟಿ ಹಿಲ್ಸ್ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ನಗರದ ಗಾಂಧಿ ಮೈದಾನದಲ್ಲಿ ಆಯೋಜಿತ ರೋಟರಿ ಜಿಲ್ಲೆ 3181 ನ ರೋಟರಿ ಸದಸ್ಯರಿಗಾಗಿನ ಕಬ್ಬಡಿ ಪಂದ್ಯಾಟದಲ್ಲಿ ಮಿಸ್ಟಿ ಹಿಲ್ಸ್ ತಂಡವು ತಂಡದನಾಯಕ ಕಪಿಲ್ ನೇತೖತ್ವದಲ್ಲಿ ಪಿರಿಯಾಪಟ್ಟಣ ಮಿಡ್ ಟೌನ್ ತಂಡವನ್ನು ಮಣಿಸಿ ಕಬ್ಬಡಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 25 ಸಾವಿರ ನಗದು ಮತ್ತು ಟ್ಪೋಫಿಯನ್ನು ಮಿಸ್ಟಿ ಹಿಲ್ಸ್ ಪಡೆದುಕೊಂಡಿದೆ. ದ್ವಿತೀಯ ಬಹುಮಾನವನ್ನು ಪಿರಿಯಾಪಟ್ಟಣ ಮಿಡ್ ಟೌನ್ ತಂಡ ಪಡೆದುಕೊಂಡು 15 ಸಾವಿರ ರು. ನಗದು ಮತ್ತು ಟ್ರೋಫಿಯನ್ನು ಪಡೆದರೆ, ಸೆಂಟ್ರಲ್ ಪುತ್ತೂರು ತಂಡವು ತೖತೀಯ ಮತ್ತು ಹುಣಸೂರು ರೋಟರಿ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮಡಿಕೇರಿ ರೋಟರಿ ವುಡ್ಸ್ ತಂಡವು ಅತ್ಯಂತ ಶಿಸ್ತು ಬದ್ದ ತಂಡಕ್ಕಾಗಿನ ಪ್ರಶಸ್ತಿ ಪಡೆಯಿತು. ಆಲ್ ರೌಂಡರ್ ಆಟಗಾರ ಪ್ರಶಸ್ತಿಯನ್ನು ಪಿರಿಯಾಪಟ್ಟಣ ಮಿಡ್ ನ ಸುನೀಲ್ ಪಡೆದುಕೊಂಡರೆ, ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ಕುಲ್ಲೇಟಿರ ಅಜಿತ್ ನಾಣಯ್ಯ ತಮ್ಮದಾಗಿಸಿಕೊಂಡರು ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಮಿಸ್ಟಿ ಹಿಲ್ಸ್ ತಂಡದ ನಾಯಕ ದುಗ್ಗಳ ಕಪಿಲ್ ಪಡೆದುಕೊಂಡರು. ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಬಹುಮಾನಗಳನ್ನು ರೋಟರಿ ಜಿಲ್ಲಾ ಗವನ೯ರ್ ವಿಕ್ರಂದತ್ತ ಮತ್ತು ನಿಯೋಜಿತ ಗವನ೯ರ್ ಸತೀಶ್ ಬೋಳಾರ್ ವಿತರಿಸಿದರು. ಈ ಸಂದಭ೯ ಮಾತನಾಡಿದ ವಿಕ್ರಂದತ್ತ, ಇದೇ ಮೊದಲ ಬಾರಿಗೆ ರೋಟರಿ ಜಿಲ್ಲೆಯಲ್ಲಿ ಆಯೋಜಿತ ಕಬ್ಬಡಿ ಪಂದ್ಯಾಟವನ್ನು ಮಿಸ್ಟಿ ಹಿಲ್ಸ್ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದೆ. ಮುಂದಿನ ವಷ೯ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಕಬ್ಬಡಿ ಪಂದ್ಯಾಟ ಆಯೋಜಿಸಲಾಗುತ್ತಿದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ 120 ವಷ೯ಗಳು ತುಂಬಿರುವ ಈ ಸಂದಭ೯ ಕಬ್ಬಡಿಯ ಮೂಲಕ ಮತ್ತಷ್ಟು ಸಂಭ್ರಮ ಲಭಿಸಿದೆ ಎಂದು ಶ್ಲಾಘಿಸಿದರು. ರೋಟರಿ ಸದಸ್ಯರು ಪ್ರತೀ ವಷ೯ ನೀಡುವ ದೇಣಿಗೆಯು ವಿಶ್ವವ್ಯಾಪಿ ಸಾಮಾಜಿಕ ಸೇವಾ ಕಾಯ೯ಗಳ ಮೂಲಕ ಅತ್ಯುತ್ತಮ ಕಾಯ೯ಗಳಿಗೆ ವಿಶ್ವವ್ಯಾಪಿ ವಿನಿಯೋಗವಾಗುತ್ತಿದೆ ಎಂದರು. ಸಮಾಜದ ಸಂತೋಷವನ್ನು ಮಾತ್ರ ನೋಡಿ ಎಲ್ಲರೂ ಖುಷಿಯಾಗಿದ್ದಾರೆ ಎಂದು ನಂಬುವ ಬದಲಿಗೆ, ಸಮಾಜದಲ್ಲಿ ಇನ್ನೂ ಸಂತೋಷವನ್ನೇ ಕಾಣದೇ ಸಂಕಷ್ಟದಲ್ಲಿಯೇ ಇರುವ ಅನೇಕರ ಜೀವನದಲ್ಲಿ ರೋಟರಿ ಸದಸ್ಯರು ಬದಲಾವಣೆ ತರುವ ನಿಟ್ಟಿನಲ್ಲಿ ಕಾಯೋ೯ನ್ಮುಖರಾಗಬೇಕೆಂದು ವಿಕ್ರಂದತ್ತ ಸಲಹೆ ಮಾಡಿದರು. ನಾವು ಮತ್ತು ನಮ್ಮ ಕುಟುಂಬ ನೆಮ್ಮದಿಯಿಂದ ಇದ್ದ ಮಾತ್ರಕ್ಕೇ ಎಲ್ಲರೂ ನೆಮ್ಮದಿಯಿಂದ ಇದ್ದಾರೆ ಎಂದು ತಿಳಿಯುವ ಬದಲಿಗೆ ನೆಮ್ಮದಿಯಿಂದ ಇರದ ಜನರ ನೆಮ್ಮದಿಗೂ ಕಾರಣವಾಗುವಂತ ಕಾಯ೯ಯೋಜನೆ ಹಮ್ಮಿಕೊಂಡಾಗ ಅದುವೇ ನಿಜವಾದ ನೆಮ್ಮದಿಯಾಗಲಿದೆ ಎಂದರು. ಕಾಯ೯ಕ್ರಮದಲ್ಲಿ ರೋಟರಿ ಸಹಾಯಕ ಗವನ೯ರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ಹಾಜರಿದ್ದರು. ಎಸ್ . ಎಂ. ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾತಾ೯ಸಂಚಿಕೆಯನ್ನು ಈ ಸಂದಭ೯ ಬಿಡುಗಡೆಗೊಳಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಸ್ವಾಗತಿಸಿ, ಕಾಯ೯ದಶಿ೯ ಕಟ್ಟೆಮನೆ ಸೋನಜಿತ್ ವಂದಿಸಿದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ. ಬಹುಮಾನ ಪ್ರಕಟಿಸಿದರು. ಕಬ್ಬಡಿ ಆಯೋಜನಾ ಸಮಿತಿ ಸಂಚಾಲಕ ಜಯಂತ್ ಪೂಜಾರಿ, ಸಹಸಂಚಾಲಕ ದುಗ್ಗಳ ಕಪಿಲ್, ರೋಟರಿ ಜಿಲ್ಲಾ ಕಾಯ೯ದಶಿ೯ ರಿತೇಶ್ ಬಾಳಿಗ, ರೋಟರಿ ವಲಯ 6 ರ ವಿವಿಧ ರೋಟರಿ ಸಂಸ್ಥೆಗಳಿಂದ ಸದಸ್ಯರು ಪಾಲ್ಗೊಂಡಿದ್ದರು.