Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕಲಾವಿದ ಬಿ.ಕೆ.ಗಣೇಶ್ ರೈ ರಚಿತ ಮಾತೆ ಕಾವೇರಿಯ ಚಿತ್ರಪಟ ಬಿಡುಗಡೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕಲಾವಿದ ಬಿ.ಕೆ.ಗಣೇಶ್ ರೈ ರಚಿತ ಮಾತೆ ಕಾವೇರಿಯ ಚಿತ್ರಪಟ ಬಿಡುಗಡೆ

ಫೆಬ್ರವರಿ 27, 20251 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಫೆ.27 NEWS DESK : ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ಡಿಜಿಟಲ್ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ರಚಿಸಿರುವ ಜೀವನದಿ ಮಾತೆ ಕಾವೇರಿಯ ನೂತನ ಚಿತ್ರಪಟವನ್ನು ಶಿವರಾತ್ರಿಯಂದು ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಶಿವರಾತ್ರಿಯ ಶುಭದಿನದಂದು ತಲಕಾವೇರಿಯ ಕಾವೇರಿ ಕುಂಡಿಕೆಯ ಬಳಿ ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಿದ ಬಿ.ಕೆ.ಗಣೇಶ್ ರೈ ಅವರು ತಮ್ಮ ಹಲವು ವರ್ಷಗಳ ಕನಸಾಗಿದ್ದ ಮಾತೆ ಕಾವೇರಿಯ ವರ್ಣರಂಜಿತ ಚಿತ್ರಪಟವನ್ನು ಅನಾವರಣಗೊಳಿಸಿದರು. ಶ್ವೇತವರ್ಣದ ಸೀರೆಯುಟ್ಟ ಮಾತೆ ಕಾವೇರಿಯು ಕಳಸವನ್ನು ಹಿಡಿದು ಪದ್ಮಾಸನ ರೂಪದಲ್ಲಿ ದರ್ಶನ ನೀಡಿ ಭಕ್ತರನ್ನು ಹರಸುತ್ತಿರುವ ಈ ಚಿತ್ರಪಟ ಅತ್ಯಂತ ಆಕರ್ಷಕ ಮತ್ತು ಅಪರೂಪದ್ದಾಗಿದೆ. ಇದು ಅಫ್ ಸೆಟ್ ವರ್ಣರಂಜಿತ ಮುದ್ರಣವಾಗಿದ್ದು, ಎ3, ಎ4, ಪೋಸ್ಟ್ ಕಾರ್ಡ್ ಮತ್ತು ಐಡಿ ಕಾರ್ಡ್ ಅಳತೆಯಲ್ಲಿ ಲಭ್ಯವಿದೆ. ಕಾವೇರಿ ಮಾತೆಯ ಪದ್ಮಾಸನ ರೂಪದ ಶ್ಲೋಕದಿಂದ ಸ್ಫೂರ್ತಿಗೊಂಡು ಈ ಚಿತ್ರ ರಚಿಸಿರುವುದಾಗಿ ಅವರು ತಿಳಿಸಿದರು. 1980ರಲ್ಲಿ ಪ್ರಥಮ ಬಾರಿಗೆ ಮಾತೆ ಕಾವೇರಿಯ ವರ್ಣಚಿತ್ರವನ್ನು ಶಿವಕಾಶಿಯಲ್ಲಿ ಮುದ್ರಿಸಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಮೂಲಕ ಬಿ.ಕೆ.ಗಣೇಶ್ ರೈ ಅವರು ಬಿಡುಗಡೆಗೊಳಿಸಿದ್ದರು. ಇದೀಗ ಬಿಡುಗಡೆಗೊಂಡಿರುವ ನೂತನ ಚಿತ್ರಪಟ ತಲಕಾವೇರಿ, ಭಾಗಮಂಡಲ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿರುವ ಮಳಿಗೆಗಳಲ್ಲಿ ದೊರೆಯುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪದ್ಮಾಸನ ರೂಪದ ಕಾವೇರಿ ಮಾತೆಯ ಚಿತ್ರಪಟವನ್ನು ನೀಡಿ ಬಿ.ಕೆ.ಗಣೇಶ್ ರೈ ಅವರು ಆಶೀರ್ವಾದ ಪಡೆದರು. ಚಿತ್ರಪಟವನ್ನು ಕಂಡು ಹೆಗ್ಗಡೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

 

Follow us Follow us
Share. WhatsApp Facebook Twitter Email Telegram Copy Link

Related Posts

ಅನುದಾನ ಹೆಚ್ಚಿದ್ದರೂ ಮಡಿಕೇರಿ ದಸರಾ ಜನಾಕರ್ಷಣೆ ಕಳೆದುಕೊಂಡಿದೆ: ಕೆ.ಎಂ. ಗಣೇಶ್ ಟೀಕೆ

ಅಕ್ಟೋಬರ್ 24, 2026

ಮಡಿಕೇರಿಯಲ್ಲಿ ಹಸಿ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಮಹತ್ವದ ಚರ್ಚೆ; ಖಾಸಗಿ ಬಸ್ ನಿಲ್ದಾಣದ ಬಳಿ ಹಸಿ ಕಸ ಸಂಸ್ಕರಣಾ ಘಟಕ, ಐಟಿಐ ಜಂಕ್ಷನ್‌ನಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪನೆಗೆ ಪರಿಶೀಲನೆ

ಅಕ್ಟೋಬರ್ 24, 2026

ಭಾಗಮಂಡಲ : ಅ.26 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ

ಅಕ್ಟೋಬರ್ 23, 2026

ಮಡಿಕೇರಿಯಲ್ಲಿ ಹಸಿ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಮಹತ್ವದ ಚರ್ಚೆ; ಖಾಸಗಿ ಬಸ್ ನಿಲ್ದಾಣದ ಬಳಿ ಹಸಿ ಕಸ ಸಂಸ್ಕರಣಾ ಘಟಕ, ಐಟಿಐ ಜಂಕ್ಷನ್‌ನಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪನೆಗೆ ಪರಿಶೀಲನೆ

ಅಕ್ಟೋಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.24: ನಗರದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಹಸಿ ಮತ್ತು ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ…

ಭಾಗಮಂಡಲ : ಅ.26 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ

ಅಕ್ಟೋಬರ್ 23, 2026

ಅಹಿಂದ ಬಳಗ ಕೊಡಗು ಜಿಲ್ಲೆ ನೂತನ ಸಮಿತಿ ರಚನೆ : ಅಧ್ಯಕ್ಷರಾಗಿ ನಾಪಂಡ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಈ.ಸುರೇಶ್ ಆಯ್ಕೆ

ಅಕ್ಟೋಬರ್ 23, 2026

ಕನ್ನಡ ರಾಜ್ಯೋತ್ಸವ : ನ.2ರಂದು ವಿರಾಜಪೇಟೆಯಲ್ಲಿ ಕರ್ನಾಟಕ ಸಂಘದಿಂದ ತಾಲ್ಲೂಕು ಮಟ್ಟದ ಸ್ಪರ್ಧೆ

ಅಕ್ಟೋಬರ್ 23, 2026

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಸ್ವಚ್ಛತಾ ಅಭಿಯಾನ ನಡೆಯಲಿ: ರಾಜೇಶ್; ಪಾಲಿಬೆಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ; 100ಕ್ಕೂ ಅಧಿಕ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಭಾಗಿ

ಅಕ್ಟೋಬರ್ 23, 2026

ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿ ಪ್ರೊ. ಭಾರತಿ ಹಿರೇಮಠ ಅಧಿಕಾರ ಸ್ವೀಕಾರ

ಅಕ್ಟೋಬರ್ 23, 2026

ಕಿತ್ತೂರು ರಾಣಿ ಚೆನ್ನಮ್ಮರ ತ್ಯಾಗ ಮತ್ತು ಶೌರ್ಯದ ಬದುಕು ಎಲ್ಲರಿಗೂ ಆದರ್ಶ : ಪುದಿಯನೆರವನ ರೇವತಿ ರಮೇಶ್

ಅಕ್ಟೋಬರ್ 23, 2026

ಮಡಿಕೇರಿ ಗಾಂಧಿ ಮೈದಾನದಲ್ಲಿ ಸ್ವಚ್ಛತಾ ಅಭಿಯಾನ : ವರ್ಷದ 365 ದಿನವೂ ಸ್ವಚ್ಛತೆಗೆ ಆದ್ಯತೆ ನೀಡಿ : ಶಾಸಕ ಡಾ.ಮಂತರ್ ಗೌಡ

ಅಕ್ಟೋಬರ್ 23, 2026

ಗೋಣಿಕೊಪ್ಪಲು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯ ನಂದಿನಿ ವಿದ್ಯಾರ್ಥಿಗಳ ಭರತನಾಟ್ಯ ಪ್ರದರ್ಶನ

ಅಕ್ಟೋಬರ್ 22, 2026

ಮೂರ್ನಾಡಿನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿಂದ ಆಯುಧ ಪೂಜೆ : ಸಾಧಕರಿಗೆ ಸನ್ಮಾನ

ಅಕ್ಟೋಬರ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.