


ಮಡಿಕೇರಿ ಮಾ.3 NEWS DESK : ಇತಿಹಾಸ ಪ್ರಸಿದ್ಧ ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವವು ಮಾ.8 ರಿಂದ 19ರ ವರೆಗೆ ನಡೆಯಲಿದೆ. ದೇವಾಲಯದಲ್ಲಿ ಹನ್ನೆರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ.
ಮಾ.8 ರಂದು ಬೆಳಿಗ್ಗೆ 6 ಗಂಟೆಗೆ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರಿಂದ 12 ತಳಿಯತಕ್ಕಿ, ಬೊಳ್‍ಚ್ಚ, ದುಡಿಕೊಟ್ಟ್ ಪಾಟ್‍ನೊಂದಿಗೆ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 6.30 ಗಂಟೆಯಿಂದ ಊರಿನ ಪರವಾಗಿ ಶತರುದ್ರಾಭಿಷೇಕ, ಪ್ರಸಾದ ವಿತರಣೆ ನಡೆಯದ್ದು, ರಾತ್ರಿ 8 ಗಂಟೆಗೆ ಆರಿದ್ರ ನಕ್ಷತ್ರದ ಮೂಹೂರ್ತದಲ್ಲಿ “ಕೊಡಿಮರ” ನಿಲ್ಲಿಸುವುದು, ಶುದ್ಧ ಕಲಶ, ಉತ್ಸವ ಮೂರ್ತಿ ದರ್ಶನ, ಪ್ರಸಾದ ವಿತರಣೆ ಹಾಗೂ ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ. ಮಾ.9 ರಂದು ಪೂರ್ವಾಹ್ನ 11 ಗಂಟೆಯಿಂದ ನಿತ್ಯಪೂಜೆ, ಸಂಜೆ 7 ಗಂಟೆಗೆ ತೂಚಂಬಲಿ ನಡೆಯಲಿದೆ. ಮಾ.10 ರಂದು ಪ್ರಾತಃಕಾಲ 5 ಗಂಟೆಗೆ ಉತ್ಸವ ಮೂರ್ತಿದರ್ಶನ, ಪೂರ್ವಾಹ್ನ 11 ಗಂಟೆಯಿಂದ ನಿತ್ಯಪೂಜೆ, 7 ಗಂಟೆಗೆ ತೂಚಂಬಲಿ ನಡೆಯಲಿದೆ. ಮಾ.11 ರಂದು ಪ್ರಾತಃಕಾಲ 5 ಗಂಟೆಗೆ ಉತ್ಸವ ಮೂರ್ತಿದರ್ಶನ, ಪೂರ್ವಾಹ್ನ 10 ಗಂಟೆಗೆ ಭಂಡಾರ ಬರುವುದು, 11 ಗಂಟೆಗೆ ನಿತ್ಯಪೂಜೆ, ಸಂಜೆ 7 ಗಂಟೆಗೆ ತೂಚಂಬಲಿ ಜರುಗಲಿದ್ದು, ಮಾ.12 ರಂದು ಪ್ರಾತಃಕಾಲ 5 ಗಂಟೆಗೆ ಇರುಬಳಕು, ಪೂರ್ವಾಹ್ನ 11 ಗಂಟೆಗೆ ನಿತ್ಯಪೂಜೆ, ತುಲಭಾರ, ಸಂಜೆ 7 ಗಂಟೆಗೆ ತೂಚಂಬಲಿ ನೆರವೇರಲಿದೆ. ಮಾ.13 ರಂದು ಪ್ರಾತಃಕಾಲ 5 ಗಂಟೆಗೆ ಇರುಬಳಕು, ಪೂರ್ವಾಹ್ನ 11 ಗಂಟೆಗೆ ನಿತ್ಯಪೂಜೆ, ತುಲಾಭಾರ, ಸಂಜೆ 7 ಗಂಟೆಗೆ ತೂಚಂಬಲಿ, ಮಾ.14 ರಂದು ಪ್ರಾತಃಕಾಲ 5 ಗಂಟೆಗೆ ಇರುಬಳಕು, ಪೂರ್ವಾಹ್ನ 11 ಗಂಟೆಗೆ ನಿತ್ಯ ಪೂಜೆ, ತುಲಾಭಾರ, ಸಂಜೆ 7 ಗಂಟೆಗೆ ತೂಚಂಬಲಿ, ಮಾ.15 ರಂದು ಪ್ರಾತಃಕಾಲ 5 ಗಂಟೆಗೆ ಇರುಬಳಕು, ಪೂರ್ವಾಹ್ನ 10 ಗಂಟೆಗೆ ಹರಕೆ ಬಳಕು, 11 ಗಂಟೆಯಿಂದ ನಿತ್ಯ ಪೂಜೆ, ತುಲಾಭಾರ, ಸಂಜೆ 7 ಗಂಟೆಗೆ ತೂಚಂಬಲಿ, ಉತ್ಸವ ಮೂರ್ತಿ ದರ್ಶನ ನಡೆಯಲಿದೆ. ಮಾ.16 ರಂದು ಪ್ರಾತಃಕಾಲ 5 ಗಂಟೆಗೆ ಇರುಬಳಕು, ಹರಕೆ ಬಳಕಿನ ಪ್ರಸಾದ ವಿತರಣೆ, 11 ಗಂಟೆಗೆ ನಿತ್ಯ ಪೂಜೆ, ತುಲಾಭಾರ, ಸಂಜೆ 5 ಗಂಟೆಗೆ “ನೆರಪು”, ರಾತ್ರಿ 8 ಗಂಟೆಗೆ “ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ”, ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಲಿದೆ. ಮಾ.17 ರಂದು ಪ್ರಾತಃಕಾಲ 5 ಗಂಟೆಗೆ ಇರುಬಳಕು, ಹರಕೆ ಬಳಕಿನ ಪ್ರಸಾದ ವಿತರಣೆ, 11 ಗಂಟೆಗೆ ನಿತ್ಯಪೂಜೆ, ತುಲಾಭಾರ ನಡೆಯಲಿದ್ದು, ಸಂಜೆ 5 ಗಂಟೆಗೆ “ನೆರಪು”, ರಾತ್ರಿ 8 ಗಂಟೆಗೆ “ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಲಿದೆ. ಮಾ.18 ರಂದು ಪೂರ್ವಾಹ್ನ 10 ಗಂಟೆಯಿಂದ ನಿತ್ಯ ಪೂಜೆ, ತುಲಾಭಾರ, ಮಧ್ಯಾಹ್ನ 3 ಗಂಟೆಗೆ ಶಾಸ್ತ್ರೋಕ್ತವಾಗಿ 12 ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ, ಸಂಜೆ 5 ಗಂಟೆಗೆ ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ 8.30 ಗಂಟೆಗೆ ಉತ್ಸವ ಮೂರ್ತಿಯನ್ನು ಊರಿನ ಪ್ರತಿ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಪಿನೊಂದಿಗೆ ತಳಿಯತಕ್ಕಿ ಬೊಳ್‍ಚ್ಚದೊಂದಿಗೆ ಸ್ವಾಗತಿಸುವುದರ ಮೂಲಕ ಭಕ್ತಾದಿಗಳಿಗೆ ಉತ್ಸವ ಮೂರ್ತಿ ದರ್ಶನ, ದೇವರ ನೃತ್ಯ ನಂತರ ವಸಂತ ಪೂಜೆ ನಡೆಯಲಿದೆ. ಸಂಜೆ 6 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮಾ.19 ರಂದು 10 ಗಂಟೆಗೆ “ಕೊಡಿಮರ” ಇಳಿಸುವ ಮೂಲಕ ಈ ಬಾರಿಯ ಉತ್ಸವ ಸಂಪನ್ನಗೊಳ್ಳಲಿದೆ. ಪೂರ್ವಾಹ್ನ 11 ಗಂಟೆಯಿಂದ ಎಂದಿನಂತೆ ನಿತ್ಯಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕ ಮುಖ್ಯಸ್ಥರು, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮನವಿ ಮಾಡಿದೆ.
ತುಲಾಭಾರ ಸೇವೆ :: ತುಲಾಭಾರ ಸೇವೆ ಮಾಡಿಸುವವರು ಅಕ್ಕಿ, ಬೆಲ್ಲ, ಎಣ್ಣೆ, ತರಕಾರಿ ಇತ್ಯಾದಿ ವಸ್ತುಗಳನ್ನು ತರಬೇಕೆಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ. ತುಲಾಭಾರ ಸೇವೆಯು ಮಾ.12 ರಿಂದ 18ರವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 81978 70058 ಸಂಪರ್ಕಿಸಬಹುದು.