


ಮಡಿಕೇರಿ NEWS DESK ಮಾ.5 : ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿತ ಆರೋಪಿಯಾಗಿರುವ ವ್ಯಕ್ತಿಗೆ ಟೂತ್ ಪೇಸ್ಟ್ ಟ್ಯೂಬ್ ನಲ್ಲಿ ಮಾದಕ ವಸ್ತು ನೀಡಲೆಂದು ತಂದಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿ ಸುರಭಿಲ್ (26) ಎಂಬಾತ ಬಂಧಿತ ಆರೋಪಿಯಾಗಿದ್ದು, ಟೂತ್ ಪೇಸ್ಟ್ ಟ್ಯೂಬ್ ಸಹಿತ 24 ಗ್ರಾಂ ಹ್ಯಾಶಿಶ್ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣಾಧೀನ ಬಂಧಿತ ಆರೋಪಿ ಸನಮ್ ಎಂಬಾತನ ಸಹೋದರನೆಂದು ಹೇಳಿಕೊಂಡು ಸಂದರ್ಶನಕ್ಕಾಗಿ ಸುರಭಿಲ್ ಕಾರಾಗೃಹಕ್ಕೆ ಬಂದು ದಿನ ನಿತ್ಯದ ಸಾಮಾಗ್ರಿಗಳಾದ ಟೂತ್ ಪೇಸ್ಟ್, ಟೂತ್ ಬ್ರಶ್, ಸೋಪ್, ಬಟ್ಟೆ ಸೋಪ್ ಮತ್ತು ಶ್ಯಾಂಪ್ ನ್ನು ನೀಡಲು ಮುಂದಾಗುತ್ತಾನೆ. ಜಿಲ್ಲಾ ಕಾರಾಗೃಹ ಅಧೀಕ್ಷಕ ಸಂಜಯ್ ಜತ್ತಿ ಅವರು ವಸ್ತುಗಳನ್ನು ಪರಿಶೀಲಿಸುವ ಸಂದರ್ಭ ಟೂತ್ ಪೇಸ್ಟ್ ಟ್ಯೂಬ್‌ನ ಒಳಗೆ ಪೇಸ್ಟ್ನ ಬದಲಿಗೆ ಕಪ್ಪು ಬಣ್ಣದ ಅಮಲು ಪದಾರ್ಥವನ್ನು ತುಂಬಿ ತಂದಿರುವುದು ಕಂಡುಬAದಿದೆ. ಇದು ನಿಷೇಧಿತ ಹ್ಯಾಶಿಶ್ ಮಾದಕ ವಸ್ತು ಎಂದು ತಿಳಿದು ಬಂದಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.