


ಪೋರ್ಟ್ ಲೂಯಿಸ್ ಮಾ.11 NEWS DESK : ಎರಡು ದಿನಗಳ ಭೇಟಿಗಾಗಿ ಮಾರಿಷಸ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾರಿಷಸ್‌ನಲ್ಲಿರುವ ಭಾರತೀಯ ವಲಸಿಗರು ಆತ್ಮೀಯವಾಗಿ ಸ್ವಾಗತಿಸಿದರು. ಇಂದು ಮಾರಿಷಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಭಾರತೀಯ ಸಮುದಾಯದ ಮಹಿಳೆಯರು ಬಿಹಾರಿ ಸಾಂಪ್ರದಾಯಿಕ ಗೀತ್ ಗವಾಯಿಯೊಂದಿಗೆ ಸ್ವಾಗತಿಸಿದರು. ಈ ವೇಳೆ ಹಾಡುಗಳನ್ನು ಹಾಡುತ್ತಿರುವವರೊಂದಿಗೆ ಪ್ರಧಾನಿ ಮೋದಿ ಚಪ್ಪಾಳೆ ತಟ್ಟುತ್ತಾ ಆನಂದಿಸಿದರು. ಗೀತ್ ಗವಾಯಿ ಎಂಬುದು ಭಾರತದ ಭೋಜ್‌ಪುರಿ ಪಟ್ಟಿಯ ಮಹಿಳೆಯರು ಮಾರಿಷಸ್‌ಗೆ ತಂದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವ ಸಾಂಪ್ರದಾಯಿಕ ಭೋಜ್‌ಪುರಿ ಸಂಗೀತ ಮೇಳವಾಗಿದೆ. “ಮಾರಿಷಸ್‌ನಲ್ಲಿರುವ ಭಾರತೀಯ ಸಮುದಾಯದಿಂದ ಬಂದ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಭಾವುಕನಾಗಿದ್ದೇನೆ. ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಅವರ ಬಲವಾದ ನಂಟು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.