


ಮಡಿಕೇರಿ NEWS DESK ಮಾ.11 : ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೈಲುಕುಪ್ಪೆ ಹೆದ್ದಾರಿಯಲ್ಲಿ ನಡೆದಿದೆ. ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿ, ದೇವಾಂಗ ಸಂಘದ ಸಂಚಾಲಕ ಡಿ.ಎನ್.ಶಶಿ (47) ಮೃತ ದುರ್ದೈವಿ. ಅಪಘಾತದ ತೀವ್ರತೆಗೆ ಶಶಿ ಅವರ ತಲೆ ನಜ್ಜುಗುಜ್ಜಾಗಿದೆ. ಬೈಲುಕುಪ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.