


ಪೋರ್ಟ್ ಲೂಯಿಸ್ ಮಾ.12 NEWS DESK : ಮಾರಿಷಸ್ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ ‘ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆ್ಯಂಡ್ ಕೀ ಆಫ್ ದಿ ಇಂಡಿಯನ್ ಒಷಿಯನ್’ ನೀಡಿ ಗೌರವಿಸಿದೆ. ಆ ಮೂಲಕ ನರೇಂದ್ರ ಮೋದಿ ಅವರು ಮಾರಿಷಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಪ್ರಧಾನಿ ಎನಿಸಿದ್ದಾರೆ. ಈ ಗೌರವಕ್ಕೆ ಆಯ್ಕೆ ಮಾಡಿರುವ ದ್ವೀಪ ರಾಷ್ಟ್ರದ ಜನರು ಮತ್ತು ಸರ್ಕಾರಕ್ಕೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ‘ನಾನು ಈ ಗೌರವವನ್ನು ವಿನಯಪೂರ್ವಕ ಸ್ವೀಕರಿಸುತ್ತೇನೆ. ಇದು ನನಗೆ ಸಿಕ್ಕ ಗೌರವ ಮಾತ್ರವಲ್ಲದೆ ಭಾರತ ಮತ್ತು ಮಾರಿಷಸ್ ದೇಶದ ನಡುವಣ ಚಾರಿತ್ರಿಕ ಬಾಂಧವ್ಯಕ್ಕೆ ಸಿಕ್ಕ ಗೌರವ ಆಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.