


ವಿರಾಜಪೇಟೆ ಮಾ.12 NEWS DESK : ವಿರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕುಟ್ಟ ಶ್ರೀ ಕಾಕ್ಕತ್ತೋಡು ಕ್ಷೇತ್ರದ ಎರಡು ಶಕ್ತಿಶಾಲಿ ದೇವಿಗಳಾದ ಶ್ರೀ ವನದುರ್ಗಾ ಮತ್ತು ಶ್ರೀ ಕಾಳಿ ಮಾತೆಯ ವಾರ್ಷಿಕ ಉತ್ಸವವು ಮಾ.15 ರಿಂದ 17ರ ವರೆಗೆ ಹಲವು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ದೇವಾಲಯದಲ್ಲಿ ಮೂರು ದಿನಗಳ ಕಾಲ ದೇವಿಗೆ ಅಭಿಷೇಕ ಪೂಜೆ, ಗಣಪತಿ ಹೋಮ, ಮಧ್ಯಾಹ್ನದ ಪೂಜೆಗಳು ನಡೆಯಲಿದೆ. ಮಾ.15 ರಂದು ಉಷಾಪೂಜೆ, ಮಧ್ಯಾಹ್ನ ವಿಶೇಷ ಪೂಜೆ, ಸಂಜೆ ತೆರೆ ಮಹೋತ್ಸವ ಹಾಗೂ ರಾತ್ರಿ ಪೂಜೆ ನಡೆಯಲಿದೆ. ಮಾ.16 ರಂದು ಸಂಜೆ 6 ಗಂಟೆಗೆ ಸಹಸ್ರ ದೀಪ, ಅಲಂಕಾರ ಪೂಜೆ, ದೇವಿ ಪೂಜೆ, ಪುಷ್ಪಾಲಂಕಾರ ನಡೆಯಲಿದೆ. ಮಾ.17 ರಂದು ಬೆಳಿಗ್ಗೆ ಉಷಾಪೂಜೆ, ನವಕ ಪೂಜೆ, ಕಲಶಾಭಿಷೇಕ, ಸಂಜೆ ಭಗವತಿ ಸೇವೆ, ಸರ್ಪ ಬಲಿ, ರಾತ್ರಿ ಪೂಜೆ, ತಾಲಪ್ಪೋಲಿ ಮೆರವಣಿಗೆ, ಸ್ವೀಕಾರ ಗುರುತಿ ಪೂಜೆ ನಡೆಯಲಿದೆ.
ಉತ್ಸವದ ಅಂಗವಾಗಿ ರಾತ್ರಿ 9 ಗಂಟೆಯ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಾ.17 ರಂದು ಕೇರಳ ರಾಜ್ಯ ಸುಪ್ರಸಿದ್ಧ ವಾದ್ಯಗೋಷ್ಟಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲದ ಆಡಳಿತ ಮಂಡಳಿ ಕೋರಿದೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ