


ಸುಂಟಿಕೊಪ್ಪ NEWS DESK ಮಾ.12 : ಕೆದಕಲ್ ಗ್ರಾಮದ ಶ್ರೀಭದ್ರಕಾಳೇಶ್ವರಿ ದೇವಾಲಯದ 25ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಕುಂಭಾಭಿಷೇಕ, ಕಳಶ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ ನಡೆಯಿತು. ವಿಶೇಷ ಪೂಜೆ, ಆರಾಧನೆ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಯಿತು. ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು. ದೇವಾಲಯ ಸಮಿತಿಯ ಅಧ್ಯಕ್ಷ ಸಿ.ಎ.ಕರುಂಬಯ್ಯ, ಕಾರ್ಯದರ್ಶಿ ಕೆ.ಎಂ.ಸತೀಶ್, ತಕ್ಕ ಮುಖ್ಯಸ್ಥ ಪುಲ್ಲೇರ ತಿಮ್ಮಯ್ಯ, ಪುಲ್ಲೇರ, ಕಾಳಪ್ಪ, ಪಿ.ಬಿ.ವಸಂತ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು. ಕೆದಕಲ್, ಬೋಯಿಕೇರಿ, ಹಾಲೇರಿ, ಕಾಂಡನಕೊಲ್ಲಿ, ಸುಂಟಿಕೊಪ್ಪ, ಬಾಳೆಕಾಡು, ಮಡಿಕೇರಿ, ಹೊರೂರು ಸೇರಿದಂತೆ ಹೊರ ಜಿಲ್ಲೆಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.