


ನಾಪೋಕ್ಲು ಮಾ.15 NEWS DESK : ಮೂರ್ನಾಡಿನ ಮಾರುತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಘಟಿಕೋತ್ಸವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಡಂಡ ಅಪ್ಪಚ್ಚು, ಪದವೀಧರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಆಗಬೇಕಾದರೆ ಪ್ರಾರಂಭದಲ್ಲಿ ಅವರ ತಳಹದಿ ಉತ್ತಮವಾಗಿರಬೇಕು. ಶಿಕ್ಷಕರು ಕಠಿಣ ಪರಿಶ್ರಮದಿಂದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಉತ್ತಮರಾಗಿ ರೂಪಿಸುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸಾಮಾಜಿಕ, ಭಾವನಾತ್ಮಕ ಬೌದ್ಧಿಕ ಅಂಶಗಳ ಕುರಿತು ತರಬೇತಿ ನೀಡಬೇಕು ಎಂದರು. ಯುಕೆಜಿಯ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಶಿಕ್ಷಕರಿಗೆ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ಒಂದನೇ ತರಗತಿ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಯುಕೆಜಿಯ ಪ್ರತಿಭಾನ್ವಿತ ಪುಟ್ಟ ಮಕ್ಕಳು ಪದವಿ ನಿಲುವಂಗಿ ಮತ್ತು ಕ್ಯಾಪ್ ಧರಿಸಿ ಪದವಿ ಸ್ವೀಕರಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಅಪ್ಪಚ್ಚು, ಉಪಾಧ್ಯಕ್ಷ ಚೇಂದ್ರಿಮಾಡ ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಬಡುವಂಡ ಅರುಣ್, ಪ್ರಾಂಶುಪಾಲರಾದ ಸುಮಿತ್ರಾ, ಉಪ ಪ್ರಾಂಶುಪಾಲರಾದ ಎಂ.ಡಿ.ಹೇಮಾವತಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.