


ಕುಶಾಲನಗರ ಮಾ.15 NEWS DESK : ತಾಲ್ಲೂಕಿನ ಬಲಿಜ ಸಮಾಜದ ವತಿಯಿಂದ ಕುಲಗುರು ಕೈವಾರ ತಾತಯ್ಯನವರ 299 ನೇ ಜಯಂತಿಯನ್ನು ಕುಶಾಲನಗರ ಬಲಿಜ ಸಮಾಜದ ಕಚೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಯೋಗಿ ನಾರೇಯಣರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಲಾಯಿತು. ಯೋಗಿ ನಾರೇಯಣರು ಈ ನಾಡು ಕಂಡ ಅಪ್ರತಿಮ ಶ್ರೇಷ್ಠ ಯತೀಂದ್ರರು. ಅವರು ತಮ್ಮ ಸಾಧನಾ ಶಕ್ತಿಯಿಂದ ಜಗತ್ತನ್ನು ಮುನ್ನಡೆಸುತ್ತಿರುವ ಪಾರ್ವತಿ ಪರಮೇಶ್ವರರೇ ಸ್ವತಃ ಲೇಖನಿ ಕೊಟ್ಟು ಬರೆಸಿದ ತ್ರಿಕಾಲ ಜ್ಞಾನವನ್ನು ಬರೆಸಿದ ಬಗ್ಗೆ ಪ್ರತೀತಿ ಇದ್ದು, ಇದು ಕೃತಯುಗ, ತ್ರೇತಾಯುಗ ಹಾಗೂ ದ್ವಾಪರ ಯುಗಗಳಿಗೂ ಅನ್ವಯವಾಗುವಂತಿತ್ತು. ಹಾಗಾಗಿ ನಾರೇಯಣರು ನಂತರ ಕೈವಾರ ತಾತಯ್ಯ ನಾಗಿ ಪ್ರಸಿದ್ದಿ ಪಡೆದರೆಂದು ಬಲಿಜ ಸಮಾಜದ ಅಧ್ಯಕ್ಷ ಆರ್.ಬಾಬಣ್ಣ ಹೇಳಿದರು. ಈ ಸಂದರ್ಭ ಸಮಾಜದ ಗೌರವಾಧ್ಯಕ್ಷ ಟಿ.ಎಸ್.ಬಾಲಕೃಷ್ಣ, ಉಪಾಧ್ಯಕ್ಷ ಎಂ.ಆರ್.ಗಣೇಶ್, ಕಾರ್ಯದರ್ಶಿ ಟಿ.ಎಸ್.ನಿರಂಜನ್, ಸಹಕಾರ್ಯದರ್ಶಿ ಟಿ.ಎನ್.ಜಯರಾಂ, ಖಜಾಂಚಿ ಟಿ.ಬಿ.ಸತೀಶ್, ಸಂಚಾಲಕ ಸಿ.ಎನ್.ಮದನ್, ಪ್ರಮುಖರಾದ ಟಿ.ಡಿ.ದಯಾನಂದ್, ಸವಿತಾ ದಯಾನಂದ, ಶಿಲ್ಪಾ ಸತೀಶ್, ಚಂದ್ರಕಲಾ, ಪುಷ್ಪಾವತಿ, ಸುನಿಲ್ ಬಾಬಣ್ಣ ಸೇರಿದಂತೆ ಸಮಾಜದವರು ಇದ್ದರು. ಪೂಜಾ ಕಾರ್ಯಕ್ರಮದ ಬಳಿಕ ಎಲ್ಲರಿಗೂ ಪ್ರಸಾದ ಹಾಗೂ ತಂಪು ಪಾನೀಯ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.