


ಮಡಿಕೇರಿ ಮಾ.15 NEWS DESK : ಮಡಿಕೇರಿ ನಗರದ ಶ್ರೀಕೋದಂಡ ರಾಮ ದೇವಾಲಯದಲ್ಲಿ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯ ರಾಮೋತ್ಸವವನ್ನು ಆಚರಿಸಲು ಸಿದ್ಧತೆ ನಡೆದಿದೆ. ಏ.5 ಮತ್ತು 6ರಂದು ಅದ್ಧೂರಿಯಾಗಿ ರಾಮೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನ್ನದಾನಕ್ಕೆ ಆರ್ಥಿಕ ಅಥವಾ ಸಾಮಾಗ್ರಿ ನೆರವು ನೀಡುವವರು ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ (9880778047) ಹಾಗೂ ಆಹಾರ ಸಮಿತಿಯ ಅಧ್ಯಕ್ಷ ಹೆಚ್.ವಿ.ಸುಧಾಕರ್ (9916393382) ಅವರನ್ನು ಸಂಪರ್ಕಿಸುವಂತೆ ರಾಮೋತ್ಸವ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.