


ಮಡಿಕೇರಿ NEWS DESK ಮಾ.17 : ನಾಡಿನ ಜೀವನದಿ ಕಾವೇರಿ ಉಗಮಿಸುವ ತಲಕಾವೇರಿ ಹಾಗೂ ಶ್ರೀಭಗಂಡೇಶ್ವರ ಪುಣ್ಯ ಕ್ಷೇತ್ರಗಳಿಗೆ ತೆರಳುವ ಭಾಗಮಂಡಲ ರಸ್ತೆ ಒಟ್ಟು 7.50 ಕೋಟಿ ರೂ.ಗಳಲ್ಲಿ ಅಭಿವೃದ್ಧಿಯಾಗಲಿದೆ.NEWS DESK
ತಲಕಾವೇರಿ ಹಾಗೂ ಶ್ರೀಭಗಂಡೇಶ್ವರ ಕ್ಷೇತ್ರಗಳಿಗೆ ಪ್ರತಿದಿನ ಸಾವಿರಾರು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ನಿತ್ಯ ಭಾಗಮಂಡಲ ರಸ್ತೆಯಲ್ಲಿ ಪ್ರವಾಸಿಗರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಆದರೆ ಪುಣ್ಯಕ್ಷೇತ್ರಗಳಿಗೆ ತೆರಳುವ ಈ ಹೆದ್ದಾರಿ ಹೊಂಡ, ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.NEWS DESKಇದನ್ನು ಮನಗಂಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ರಸ್ತೆಯ ಅಭಿವೃದ್ಧಿಗೆ ತ್ವರಿತ ಕ್ರಮ ಕೈಗೊಂಡಿದ್ದಾರೆ. ಭಾಗಮಂಡಲ- ಚೆಟ್ಟಿಮಾನಿ ವ್ಯಾಪ್ತಿಯ ರಸ್ತೆ 2 ಕೋಟಿ ರೂ., ಬೆಟ್ಟಗೇರಿ- ಅಪ್ಪಂಗಳ 4 ಕೋಟಿ ರೂ. ಮತ್ತು ಚೇರಂಬಾಣೆ- ಕೊಟ್ಟೂರು ಭಾಗದ ರಸ್ತೆ 1.50 ಕೋಟಿ ರೂ.ಗಳಲ್ಲಿ ಅಭಿವೃದ್ಧಿಯಾಗಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.NEWS DESKತೀರಾ ಹದಗೆಟ್ಟಿದ್ದ ಬೆಟ್ಟಗೇರಿ ಬಳಿಯ ಬಕ್ಕ ಬಳಿಯ 700 ಮೀ. ಉದ್ದದ ರಸ್ತೆ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಯನ್ನು ಮಳೆಹಾನಿ ಅನುದಾನದಿಂದ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಅನೇಕ ವರ್ಷಗಳಿಂದ ಹೊಂಡ ಗುಂಡಿಗಳಿಂದ ಕೂಡಿದ್ದ ಮಡಿಕೇರಿ- ಭಾಗಮಂಡಲ ರಸ್ತೆಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಕೂಡಿ ಬಂದಿದ್ದು, ವಾಹನ ಚಾಲಕರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.NEWS DESK