



ನಾಪೋಕ್ಲು ಮಾ.18 NEWS DESK : ಇತಿಹಾಸ ಪ್ರಸಿದ್ಧಿ ಕರಡ ಪಾಲಂಗಾಲ ಗ್ರಾಮದ ಮಲೆತಿರಿಕೆ ಸನ್ನಿಧಿಯ ಶ್ರೀ ಮಲೆ ತಂಮ್ರಾನ್ ಈಶ್ವರ ದೇವಾಲಯದ ವಾರ್ಷಿಕ ಉತ್ಸವ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ಪುರಾತನ ಪದ್ಧತಿಯಂತೆ ಪಟ್ರಪಂಡ ಕುಟುಂಬದ ಜೋಡೆತ್ತಿನ ಎತ್ತುಪೋರಾಟ ಹಾಗೂ ಇತರರಿಂದ ಎತ್ತು ಪೋರಾಟ ಕರಡ ಶ್ರೀ ಭಗವತಿ ದೇವಾಲಯದಿಂದ ದೇವರ ಬಂಡಾರವನ್ನು ಸನ್ನಿಧಿಯಲ್ಲಿ ಒಪ್ಪಿಸಿ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಕುಯ್ಯಕೂಳ್ ವಿತರಿಸಲಾಯಿತು. ಬಳಿಕ ಮಹಾಪೂಜೆ, ಮಂಗಳಾರತಿ ನೆರವೇರಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಪಾಯಸ ಸಂತರ್ಪಣೆ ನಡೆಯಿತು. ಸನ್ನಿಧಿಯ ಮುಖ್ಯ ಅರ್ಚಕ ಪ್ರದೀಪ್ ಹಾಗೂ ತಂಡ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನಡಿಕೇರಿಯಂಡ ಸೋಮಯ್ಯ, ಉಪ ಅಧ್ಯಕ್ಷ ಪಟ್ರಪಂಡ ಜಗದೀಶ್ ಅಪ್ಪಯ್ಯ, ನಿರ್ದೇಶಕರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ ಹಾಲಿ, ಮಾಜಿ ಪದಾಧಿಕಾರಿಗಳು, ಊರಿನ ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗ, ಊರ ಪರ ಊರ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳಿಂದ ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಸೇವೆ ನೆರವೇರಿತು.
ವರದಿ : ದುಗ್ಗಳ ಸದಾನಂದ.