




ಗೋಣಿಕೊಪ್ಪ ಮಾ.20 NEWS DESK : ಅರುವತ್ತೋಕ್ಲು ಮೈಸೂರಮ್ಮ ನಗರದ ಶ್ರೀ ಆಶೀರ್ವಾದ ಮುತ್ತಪ್ಪ ಭಕ್ತ ಮಂಡಳಿ ವತಿಯಿಂದ ಮಾ.22 ಮತ್ತು 23ರಂದು ಶ್ರೀ ಮುತ್ತಪ್ಪ ದೇವರ ವಾರ್ಷಿಕೋತ್ಸವ ಜರುಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ದೇವಾಲಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ 14ನೇ ವಾರ್ಷಿಕೋತ್ಸವ ನಡೆಯಲಿದೆ. ಮಾ.22 ರಂದು ಬೆಳಗ್ಗೆ 6.30ಕ್ಕೆ ಗಣಪತಿ ಹೋಮ, 8.30ಕ್ಕೆ ಧ್ವಜಾರೋಹಣ, 9.30ಕ್ಕೆ ಬಾವಿಕಟ್ಟೆಯ ಬಳಿ ಕಳಸ ಪೂಜೆ, 4.30ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವುದು, ಸಂಜೆ 6.30ಕ್ಕೆ ಮತ್ತಪ್ಪ ದೇವರ ವೆಳ್ಳಟಂ, 7.30ಕ್ಕೆ ಬಾಲಕಿಯರ ತಾಲಪ್ಪೂಲಿ ಅರತಿ ಪೂಜೆಗೆ ಹೂರಡುವುದು, 8.30ಕ್ಕೆ ವಸೂರಿಮಲ ಅಮ್ಮನವರ ತೆರೆ ಹೊರಡುವುದು, 9.30ಕ್ಕೆ ಅನ್ನಸಂತಾರ್ಪಣೆ, 10.30ಕ್ಕೆ ಗುಳಿಗ ದೇವರ ವೆಳ್ಳಟಂ, 11 ಗಂಟೆಗೆ ಭಗವತಿ ದೇವರ ವೆಳ್ಳಟಂ ನಡೆಯಲಿದೆ. ಮಾ.23 ರಂದು ಬೆಳಿಗ್ಗೆ 6.30ಕ್ಕೆ ಮುತ್ತಪ್ಪನ ಮತ್ತು ತಿರುವಪ್ಪನ ವೆಳ್ಳಟಂ, 11 ಕ್ಕೆ ವಸೂರಿಮಲ ಅಮ್ಮನ ತೆರೆ, 11.30ಕ್ಕೆ ಭಗವತಿ ಅಮ್ಮನ ತೆರೆ, 11.45ಕ್ಕೆ ಗುಳಿಗ ದೇವರ ತೆರೆ, ಮದ್ಯಾಹ್ನ 1 ಗಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಜಿ ಸುರೇಶ ಮಾಹಿತಿ ನೀಡಿದ್ದಾರೆ.
ವರದಿ : ಕೆ.ಬಿ. ಜಗದೀಶ್ ಜೋಡುಬೀಟಿ,