






ಮಡಿಕೇರಿ ಮಾ.20 NEWS DESK : ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಏ.26 ಮತ್ತು 27 ರಂದು ಕುಶಾಲನಗರ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಲೋಗೋ ವನ್ನು ಬಿಡುಗಡೆ ಮಾಡಲಾಯಿತು. ಬೈಚನಹಳ್ಳಿ ಮುತ್ತಪ್ಪ ದೇವಸ್ಥಾನ ಆವರಣದಲ್ಲಿ ಸಂಘದ ಗೌರವ ಅಧ್ಯಕ್ಷ ಬಿ.ಟಿ.ರಮೇಶ್ ಹಾಗೂ ಅಧ್ಯಕ್ಷ ಸುದೀರ್ ಪಂದ್ಯಾವಳಿಯ ಲೋಗೋ ಬಿಡುಗಡೆ ಗೊಳಿಸಿ ಪಂದ್ಯಾವಳಿಗೆ ಶುಭಹಾರೈಸಿದರು. ಈ ಸಂದರ್ಭ ಸಮಾಜದ ಪ್ರಮುಖರು, ಪಂದ್ಯಾವಳಿಯ ಆಯೋಜಕರು ಹಾಜರಿದ್ದರು.