





ಮಡಿಕೇರಿ ಮಾ.20 NEWS DESK : ಜೈ ಭೀಮ್ ವತಿಯಿಂದ ಮಾ.30 ರಂದು ಮಡಿಕೇರಿಯಲ್ಲಿ “ಭೀಮ ಕಪ್” ಸೀಸನ್-1 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ನಗರದ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ ನಾಕೌಟ್ ಮಾದರಿಯ ಪಂದ್ಯಾವಳಿ ನಡೆಯಲಿದೆ. ಮಡಿಕೇರಿ ತಾಲ್ಲೂಕಿನ ಎಲ್ಲಾ ತಂಡಗಳಿಗೆ ಆಡಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, 4 ಓವರ್‍ಗಳಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಒಬ್ಬರಿಗೆ ಒಂದು ಓವರ್‍ಗಳನ್ನು ಸೀಮಿತಗೊಳಿಸಲಾಗಿದೆ. ಒಂದು ತಂಡದಲ್ಲಿ ಆಡಿದವರಿಗೆ ಮತ್ತೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ ಎಂದು ಪಂದ್ಯಾವಳಿಯ ಆಯೋಜಕರು ತಿಳಿಸಿದರು. ಪಂದ್ಯಾವಳಿಯ ವಿಜೇತರಿಗೆ ಪ್ರಥಮ ರೂ.10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ರೂ.6 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಸೇರಿದಂತೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಆಸಕ್ತ ತಂಡಗಳು ಮಾ.25ರ ಒಳಗೆ ಮೈದಾನ ಶುಲ್ಕ ರೂ.1,500 ಪಾವತಿಸಿ ತಂಡದ ಹೆಸರನ್ನು ನೋಂದಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗಾಗಿ ಸಂಪತ್ ರಾಜ್-9449989900, ಅರ್ಜುನ್ -9449660010 ಸಂಪರ್ಕಿಸಬಹುದಾಗಿದೆ.