







ಸಿದ್ದಾಪುರ ಮಾ.20 NEWS DESK : ಸಿದ್ದಾಪುರ ಮುಸ್ಲಿಂ ಜಮಾ ಅತ್ ನೇತೃತ್ವದಲ್ಲಿ ಮುಸ್ಲಿಂ ಯೂತ್ ಮೂಮೆಂಟ್ ವತಿಯಿಂದ ಬೃಹತ್ ಇಫ್ತಾರ್ ಕೂಟ ನಡೆಯಿತು. ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ನಡೆದ ಬೃಹತ್ ಇಫ್ತಾರ್ ಸಂಗಮದಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಾಂದವರು ಪಾಲ್ಗೊಂಡರು. ಇಫ್ತಾರ್ ಅಂಗವಾಗಿ ವಿವಿಧ ಬಗೆಯ ಹಣ್ಣು ಹಂಪಲುಗಳು, ತಿಂಡಿ ತಿನಿಸುಗಳು ತಂಪು ಪಾನೀಯ ಸೇರಿದಂತೆ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಮುಸಾವರ ಸದಸ್ಯ ಹಾಗೂ ಕೊಡಗು ಜಿಲ್ಲಾ ಉಪ ಖಾಝಿ ಎಂ.ಎಂ.ಅಬ್ದುಲ್ಲ ಪೈಜಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಮಸೀದಿಯ ಖತೀಬ್ ನೌಫಲ್ ಹುದವಿ, ಸಿದ್ದಾಪುರ ಮುಸ್ಲಿಂ ಜಮಾಆತ್ ಅಧ್ಯಕ್ಷ ಯು.ಎಂ.ಮುಸ್ತಫಾಜಿ, ಮುಸ್ಲಿಂ ಯುತ್ ಮೊಮೆಂಟ್ ಅಧ್ಯಕ್ಷ ಹ್ಯಾರಿಸ್ ಸೇರಿದಂತೆ ಮುಸ್ಲಿಂ ಜಮಆತ್ ಕಮಿಟಿಯ ಪ್ರಮುಖರು ಹಾಗೂ ಯೂತ್ ಮೊಮೆಂಟ್ ಪದಾಧಿಕಾರಿಗಳು ಸ್ಥಳೀಯರು ಹಾಜರಿದ್ದರು.