



ಮಡಿಕೇರಿ ಮಾ.25 NEWS DESK : ಕರಿಕೆ ತೋಟಂನ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮಾ.30 ರಂದು ಶ್ರೀ ಮುತ್ತಪ್ಪ ದೇವರ ವೆಳ್ಳಾಟ ನಡೆಯಲಿದೆ. ಅಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ಪಯಂಕುಟ್ಟಿ, 10.30 ಗಂಟೆಗೆ ದೇವರನು ಮಲೆ ಇಳಿಸುವುದು, 11 ಗಂಟೆಯಿಂದ ಶ್ರೀ ಮುತ್ತಪ್ಪ ದೇವರ ವೆಳ್ಳಾಟ ಜರುಗಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನದಾನ, ಸಂಜೆ 4 ಗಂಟೆಗೆ ದೇವರನು ಮಲೆ ಏರಿಸುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.
ವರದಿ : ಶಿವ ಗಿರಿ ರಾಜೇಶ್, ಕರಿಕೆ